ಟೀಂ ಇಂಡಿಯಾದಲ್ಲಿ ಚೆಸ್ ನಲ್ಲಿ ನನ್ನ ಸೋಲಿಸುವವರೇ ಇಲ್ಲ: ಯಜುವೇಂದ್ರ ಚಾಹಲ್

ಮಂಗಳವಾರ, 27 ಜೂನ್ 2023 (08:10 IST)
ಮುಂಬೈ: ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಾಹಲ್ ತಂಡದಲ್ಲಿ ತಮ್ಮ ಹವಾ ಎಷ್ಟಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ತಮಾಷೆಯ ಕಾಮೆಂಟ್ ಗಳ ಮೂಲಕ ಜನರ ಗಮನ ಸೆಳೆಯುವ ಚಾಹಲ್ ಈ ಬಾರಿ ಸಂದರ್ಶನವೊಂದರಲ್ಲಿ ನಿಜವಾಗಿಯೂ ತಮ್ಮ ತಾಕತ್ತು ಏನೆಂದು ಹೇಳಿಕೊಂಡಿದ್ದಾರೆ. ಚಾಹಲ್ ಕ್ರಿಕೆಟ್ ಗೆ ಬರುವ ಮೊದಲು ಚೆಸ್ ಆಟಗಾರರಾಗಿದ್ದರು.

ಈ ಕ್ರೀಡೆಯನ್ನು ಅವರು ಈಗಲೂ ಮರೆತಿಲ್ಲ. ಸಂದರ್ಶನವೊಂದರಲ್ಲಿ ಮಾತನಾಡಿದ ಚಾಹಲ್ ಟೀಂ ಇಂಡಿಯಾದಲ್ಲಿ ಯಾವ ಆಟಗಾರನಿಗೂ ನನ್ನನ್ನು ಚೆಸ್ ನಲ್ಲಿ ಸೋಲಿಸಲು ಸಾಧ‍್ಯವಾಗುವುದಿಲ್ಲ. ಕೆಲವೊಮ್ಮೆ ರವಿಚಂದ್ರನ್ ಅಶ್ವಿನ್ ಜೊತೆ ಇಲ್ಲಾ ಫಿಟ್ನೆಸ್ ಟ್ರೈನರ್ ಶಂಕರ್ ಬಸು ಜೊತೆ ವಿಮಾನ ಯಾನದ ಸಂದರ್ಭದಲ್ಲಿ ಚೆಸ್ ಆಡುತ್ತೇನೆ. ಇದು ನನಗೆ ಕ್ರಿಕೆಟ್ ನಲ್ಲಿ ಏಕಾಗ್ರತೆ ಹೆಚ್ಚಿಸುತ್ತದೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ