ಆರ್ ಸಿಬಿ ಅಭಿಮಾನಿಗಳ ಕಿರುಚಾಟ ತಾಳಲಾರದೇ ಕಿವಿ ಮುಚ್ಚಿಕೊಂಡರಾ ಹರ್ಮನ್ ಪ್ರಿತ್ ಕೌರ್: ಫೋಟೋ ವೈರಲ್

Krishnaveni K

ಶನಿವಾರ, 22 ಫೆಬ್ರವರಿ 2025 (08:57 IST)
ಬೆಂಗಳೂರು: ಚಿನ್ನಸ್ವಾಮಿ ಮೈದಾನದಲ್ಲಿ ನಿನ್ನೆ ಆರ್ ಸಿಬಿ ಮತ್ತು ಮುಂಬೈ ನಡುವಿನ ಪಂದ್ಯದ ವೇಳೆ ಆರ್ ಸಿಬಿ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಈ ವೇಳೆ ಮುಂಬೈ ಇಂಡಿಯನ್ಸ್ ನಾಯಕಿ ಹರ್ಮನ್ ಪ್ರೀತ್ ಕೌರ್ ಕಿವಿ ಮುಚ್ಚಿಕೊಂಡರಾ? ಹೀಗೊಂದು ಫೋಟೋ ಈಗ ವೈರಲ್ ಆಗಿದೆ.

ಎಲ್ಲೇ ಹೋದರೂ ಆರ್ ಸಿಬಿಗೆ ಅಭಿಮಾನಿಗಳು ಜಾಸ್ತಿಯೇ. ಹಾಗಿದ್ದ ಮೇಲೆ ಬೆಂಗಳೂರಿನಲ್ಲೇ ನಡೆಯುತ್ತಿರುವ ಪಂದ್ಯವೆಂದರೆ ಕೇಳಬೇಕೇ? ನಿನ್ನೆ ಸ್ಟೇಡಿಯಂ ಹೌಸ್ ಫುಲ್ ಆಗಿತ್ತು. ಎಲ್ಲಿ ನೋಡಿದರೂ ಕೆಂಪು ಜೆರ್ಸಿ, ಬಾವುಟ ಕಾಣಿಸುತ್ತಿತ್ತು.


ಪ್ರೇಕ್ಷಕರ ಚೀತ್ಕಾರ ಎಷ್ಟು ಜೋರಾಗಿತ್ತೆಂದರೆ ಆಟಗಾರರಿಗೆ ಸಹ ಆಟಗಾರ ಮಾತನಾಡಿದರೂ ಕೇಳಿಸುವಂತಿರಲಿಲ್ಲ.  ಆರ್ ಸಿಬಿ ಬ್ಯಾಟಿಂಗ್ ವೇಳೆ ಫೀಲ್ಡಿಂಗ್ ಮಾಡುತ್ತಿದ್ದ ಮುಂಬೈ ಇಂಡಿಯನ್ಸ್ ನಾಯಕಿ ಪ್ರೇಕ್ಷಕರ ಕೂಗು ತಾಳಲಾರದೇ ಕಿವಿ ಮುಚ್ಚಿಕೊಂಡಿದ್ದಾರೆ.

ಈ ಫೋಟೋ ವೈರಲ್ ಆಗಿದ್ದು ಸಾಕಷ್ಟು ಜನ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಏನಮ್ಮಾ ಹೊಟ್ಟೆ ಉರಿ ಆಗ್ತಿದೆಯಾ ಆರ್ ಸಿಬಿ ಫ್ಯಾನ್ಸ್ ನೋಡಿ ಎಂದು ಕೆಲವರು ಕಾಲೆಳೆದಿದ್ದಾರೆ. ವಿಶ್ವದ ಶ್ರೀಮಂತ ಫ್ರಾಂಚೈಸಿ ಆದರೇನು, ನಮ್ಮ ಫ್ಯಾನ್ಸ್ ಮುಂದೆ ನೀವು ಕಿವಿ ಮುಚ್ಚಿಕೊಳ್ಳಲೇಬೇಕು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ