ಮೈದಾನದಲ್ಲಿ ಮತ್ತೆ ಕಿತ್ತಾಡಿಕೊಂಡ ವಿರಾಟ್ ಕೊಹ್ಲಿ-ಗೌತಮ್ ಗಂಭೀರ್
ಲಕ್ನೋ ಮೆಂಟರ್ ಗಂಭೀರ್ ಕಳೆದ ಬಾರಿ ಚಿನ್ನಸ್ವಾಮಿ ಮೈದಾನದಲ್ಲಿ ಆರ್ ಸಿಬಿ ವಿರುದ್ಧ ಪಂದ್ಯ ಗೆದ್ದಾಗ ಪ್ರೇಕ್ಷಕರತ್ತ ಬಾಯಿ ಮುಚ್ಚಿಕೊಂಡಿರುವಂತೆ ಸನ್ನೆ ಮಾಡಿದ್ದರು. ಇಂದು ಆರ್ ಸಿಬಿ ಗೆದ್ದ ಬಳಿಕ ಕೊಹ್ಲಿ ಲಕ್ನೋ ಪ್ರೇಕ್ಷಕರತ್ತ ಬಾಯಿ ಮುಚ್ಚಿಕೊಂಡಿರುವಂತೆ ಸನ್ನೆ ಮಾಡಿದರು.
ಪಂದ್ಯದ ಬಳಿಕ ಕೈಕುಲುಕುವ ವೇಳೆ ಉಭಯ ತಂಡಗಳ ಆಟಗಾರರ ನಡುವೆ ಘರ್ಷಣೆ ನಡೆಯಿತು. ಈ ವೇಳೆ ಮಧ್ಯೆ ಪ್ರವೇಶಿಸಿದ ಗಂಭೀರ್ ಕೊಹ್ಲಿ ಜೊತೆಗೆ ಮಾತಿನ ಚಕಮಕಿ ನಡೆಸಿದರು. ಬಳಿಕ ಉಭಯ ತಂಡಗಳ ಆಟಗಾರರು ಇಬ್ಬರನ್ನೂ ಬೇರ್ಡಿಸಬೇಕಾಯಿತು. ಪಂದ್ಯದ ಬಳಿಕ ಕೊಹ್ಲಿ ನೇರವಾಗಿ ಲಕ್ನೋ ನಾಯಕ ಕೆಎಲ್ ರಾಹುಲ್ ಬಳಿ ತೆರಳಿ ಸುದೀರ್ಘವಾಗಿ ಮಾತನಾಡಿದ್ದಾರೆ.