ಲಖನೌ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮಹಿಳಾ ಪ್ರೀಮಿಯರ್ ಲೀಗ್‌ನ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿದೆ. ಶನಿವಾರ ನಡೆದ ಗುಂಪು ಹಂತದಲ್ಲಿ ಯು.ಪಿ ವಾರಿಯರ್ಸ್ ವಿರುದ್ಧ 12 ರನ್‌ಗಳ ರೋಚಕ ಸೋಲು ಅನುಭವಿಸಿದೆ.
ಟಾಸ್ ಗೆದ್ದ ಸ್ಮೃತಿ ಮಂದಾನ ಪಡೆದ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿದ್ದರು. ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯ ತಂಡವು ಜಾರ್ಜಿಯಾ ವಾಲ್ (ಔಟಾಗದೇ 99) ಅವರ ಅಮೋಘ ಬ್ಯಾಟಿಂಗ್ ಬಲದಿಂದ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 225 ರನ್ ಗಳಿಸಿತು. ಇದು ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ದಾಖಲಾದ ಗರಿಷ್ಠ ಮೊತ್ತ ಇದಾಗಿದೆ.
ಈ ಕಠಿಣ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಉತ್ತಮ ಹೋರಾಟ ನಡೆಸಿ ಸೋಲು ಕಂಡಿತು. 19.3 ಓವರ್‌ಗಳಲ್ಲಿ 213 ರನ್ ಗಳಿಸಿ ಸೋಲು ಕಂಡಿತು. ಆರ್‌ಸಿಬಿ ಪರ 69 ರನ್ ಗಳಿಸಿ ಅಬ್ಬರಿಸಿದರು. ಕೊನೆಯಲ್ಲಿ ಆರು ಎಸೆತಗಳಲ್ಲಿ 26 ರನ್ ಗಳಿಸಿ ಸ್ನೇಹಾ ರಾಣಾ ಗೆಲುವಿನ ಆಸೆ ಹುಟ್ಟಿಸಿದರು. ಆದರೆ, ಅವರ ವಿಕೆಟ್ ಪತನದೊಂದಿಗೆ ತಂಡದ ಗೆಲುವಿನ ಕನಸು ಭಗ್ನಗೊಂಡಿತು.
ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಜೈಂಟ್ಸ್ ತಂಡವು ಪ್ಲೇ ಆಫ್‌ಗೆ ಮುನ್ನಡೆದರೆ, ಆರ್‌ಸಿಬಿ ಮತ್ತು ವಾರಿಯರ್ಸ್ ತಂಡವು ನಾಕೌಟ್ ರೇಸ್‌ನಿಂದ ಹೊರಬಿತ್ತು. ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಮಂಗಳವಾರ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.