ICC Champion Trophy: ಭಾರತ ಗೆಲುವಿಗೆ 265 ರನ್‌ ಗುರಿ ನೀಡಿದ ಕಾಂಗರೂ ಪಡೆ

Sampriya

ಮಂಗಳವಾರ, 4 ಮಾರ್ಚ್ 2025 (18:54 IST)
Photo Courtesy X
ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರ ಮೊದಲ ಸೆಮಿಫೈನಲ್‌ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಸೆಣೆಸಾಡುತ್ತಿದೆ. ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ದುಕೊಂಡಿತು.

ಯುನೈಟೆಡ್ ಅರಬ್ ಎಮಿರೇಟ್ಸ್‌ನ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆಸೀಸ್ ತನ್ನ ಇನ್ನಿಂಗ್ಸ್‌ನ ಮೂರು ಎಸೆತಗಳು ಬಾಕಿ ಇರುವಾಗ 264 ರನ್‌ಗಳೊಂದಿಗೆ ಆಲೌಟಾಯಿತು.

ಗೆಲುವಿಗಾಗಿ ಭಾರತ ಇದೀಗ ಆಸ್ಟ್ರೇಲಿಯಾ ನೀಡಿದ 265 ರನ್‌ಗಳನ್ನು ಬೆನ್ನಟ್ಟಬೇಕಿದೆ.

ಆರಂಭಿಕ ಬ್ಯಾಟರ್‌ಗಳಾಗಿ ಕ್ರಿಕೆಟ್ ನಾಯಕ ರೋಹಿತ್ ಶರ್ಮಾ ಹಾಗೂ ಶುಭ್‌ಮನ್ ಗಿಲ್ ಅವರು ಶುಭಾರಂಭ ಮಾಡಿದ್ದಾರೆ.  ಮೊದಲ ಓವರ್‌ನಲ್ಲಿ ರೋಹಿತ್‌ ಶರ್ಮಾ ಒಂದು ಸಿಕ್ಸ್‌ ಅನ್ನು ಬಾರಿಸಿದ್ದಾರೆ. ಇಬ್ಬರ ಜತೆಯಾದ 4.2ಓವರ್‌ಗಳಲ್ಲಿ 25ರನ್‌ಗಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ