ಬಿಸಿಸಿಐ 161 ಕೋಟಿ ಕೊಡದೇ ಇದ್ದರೆ 2023 ವಿಶ್ವಕಪ್ ಆತಿಥ್ಯವೂ ಇಲ್ಲ! ಐಸಿಸಿ ಡಿಮ್ಯಾಂಡ್

ಭಾನುವಾರ, 23 ಡಿಸೆಂಬರ್ 2018 (09:43 IST)
ಮುಂಬೈ: 161 ಕೋಟಿ ರೂ. ನಮಗೆ ಪಾವತಿ ಮಾಡದೇ ಇದ್ದರೆ 2023 ರ ವಿಶ್ವಕಪ್ ಆತಿಥ್ಯವೂ ಸಿಗಲ್ಲ ಎಂದು ಐಸಿಸಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಎಚ್ಚರಿಕೆ ನೀಡಿದೆ.


2016 ಟಿ 20 ವಿಶ್ವಕಪ್ ಆತಿಥ್ಯ ವಹಿಸಿಕೊಂಡಿದ್ದಾಗ ಭಾರತ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ 161 ಕೋಟಿ ರೂ. ಪಾವತಿ ಮಾಡಲಾಗಿತ್ತು. ಆ ಮೊತ್ತವನ್ನು ನಮಗೆ ಬಿಸಿಸಿಐ ಪಾವತಿ ಮಾಡಬೇಕು. ಇಲ್ಲದೇ ಹೋದರೆ 2023 ರ ಏಕದಿನ ವಿಶ್ವಕಪ್ ಆತಿಥ್ಯ ನಿಮಗೆ ಸಿಗಲ್ಲ ಎಂದು ಐಸಿಸಿ ಎಚ್ಚರಿಸಿದೆ.

ಇದು ಮತ್ತೊಮ್ಮೆ ಬಿಸಿಸಿಐ ಮತ್ತು ಐಸಿಸಿ ನಡುವೆ ಆರ್ಥಿಕ ವಿಚಾರಕ್ಕೆ ಸಂಬಂಧಿಸಿದಂತೆ ತಿಕ್ಕಾಟಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಭಾರತ 2021 ರ ಚಾಂಪಿಯನ್ಸ್ ಟ್ರೋಫಿ ಮತ್ತು 2023 ರ ವಿಶ್ವಕಪ್ ಆತಿಥ್ಯ ವಹಿಸುತ್ತಿದೆ. ಒಂದು ವೇಳೆ ಬಿಸಿಸಿಐ ಐಸಿಸಿ ಮಾತನ್ನು ಧಿಕ್ಕರಿಸಿದರೆ ಆತಿಥ್ಯ ಕಳೆದುಕೊಳ್ಳಬೇಕಾಗಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ