ದುಬೈ: ಕೊರೋನಾವೈರಸ್ ನಿಂದಾಗಿ ಮುಂಬರುವ ಟಿ20 ವಿಶ್ವಕಪ್ ಕೂಡಾ ರದ್ದಾಗಬಹುದು ಎಂಬ ಆತಂಕದಲ್ಲಿ ಕ್ರಿಕೆಟ್ ಪ್ರೇಮಿಗಳಿದ್ದರು. ಆದರೆ ಇದೀಗ ಅಭಿಮಾನಿಗಳಿಗೆ ಐಸಿಸಿ ಸಿಹಿ ಸುದ್ದಿ ನೀಡಿದೆ.
ಅಕ್ಟೋಬರ್ ನಿಂದ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಕೂಟ ಯಥಾಪ್ರಕಾರ ನಡೆಯಲಿದೆ ಎಂಬ ಸುಳಿವನ್ನು ಐಸಿಸಿ ನೀಡಿದೆ. ಈ ಬಗ್ಗೆ ಐಸಿಸಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ.
ಅಕ್ಟೋಬರ್ ವೇಳೆಗೆ ಪರಿಸ್ಥಿತಿ ಸುಧಾರಿಸುವ ವಿಶ್ವಾಸವಿದೆ. ಒಂದು ವೇಳೆ ಸುಧಾರಣೆಯಾಗದೇ ಇದ್ದರೆ ಈ ವರ್ಷದ ಕೂಟವನ್ನು 2022 ಕ್ಕೆ ನಡೆಸಲಾಗುವುದು ಎಂದು ಐಸಿಸಿ ಹೇಳಿದೆ.