IND vs AUS: ಅಂದು ಸೋತಾಗ ದ್ರಾವಿಡ್ ಗೆದ್ದಾಗ ರೋಹಿತ್, ಇಂದು ಸೋತಾಗ ರೋಹಿತ್, ಗೆದ್ದಾಗ ಗಂಭೀರ್

Krishnaveni K

ಭಾನುವಾರ, 8 ಡಿಸೆಂಬರ್ 2024 (14:38 IST)
ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಸೋತ ಬಳಿಕ ಟೀಂ ಇಂಡಿಯಾ ಪರವಾಗಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಲು ಸ್ವತಃ ನಾಯಕ ರೋಹಿತ್ ಶರ್ಮಾ ಬಂದಿದ್ದಾರೆ. ಆದರೆ ದ್ರಾವಿಡ್ ಕೋಚ್ ಆಗಿದ್ದಾಗ ಹೀಗಿರಲಿಲ್ಲ.

ರಾಹುಲ್ ದ್ರಾವಿಡ್ ಕೋಚ್ ಆಗಿದ್ದಾಗ ತಂಡ ಸೋತಾಗ ಸ್ವತಃ ತಾವೇ ಪತ್ರಿಕರ್ತರ ಬೌನ್ಸರ್ ಗಳನ್ನು ಎದುರಿಸಲು ಪತ್ರಿಕಾಗೋಷ್ಠಿಗೆ ಬರುತ್ತಿದ್ದರು. ಎಲ್ಲದಕ್ಕೂ ತಾಳ್ಮೆಯಿಂದಲೇ ಉತ್ತರಿಸುತ್ತಿದ್ದರು. ಇದಕ್ಕೆ ಏಕದಿನ ವಿಶ್ವಕಪ್ ಫೈನಲ್ ಸೋಲಿನ ಬಳಿಕ ಅವರು ಪತ್ರಿಕಾಗೋಷ್ಠಿಯನ್ನು ಎದುರಿಸಿದ್ದು ಸಾಕ್ಷಿ. ದ್ರಾವಿಡ್ ಕೋಚ್ ಆಗಿದ್ದಾಗ ತಂಡ ಗೆದ್ದರೆ ಮಾತ್ರ ರೋಹಿತ್ ಶರ್ಮಾ ಪತ್ರಿಕಾಗೋಷ್ಠಿಗೆ ಬರುತ್ತಿದ್ದರು.

ಆದರೆ ಈಗ ಗೌತಮ್ ಗಂಭೀರ್ ಕೋಚ್ ಆದ ಮೇಲೆ ಎಲ್ಲವೂ ಬದಲಾಗಿದೆ. ತಂಡ ಸೋತಾಗಲೆಲ್ಲಾ ಸ್ವತಃ ನಾಯಕ ರೋಹಿತ್ ಶರ್ಮಾ ಪತ್ರಿಕಾಗೋಷ್ಠಿಗೆ ಬಂದು ಸಮಜಾಯಿಷಿ ಕೊಡುತ್ತಿದ್ದಾರೆ. ತಂಡ ಗೆದ್ದಾಗ ಮಾತ್ರ ಗಂಭೀರ್ ಪತ್ರಿಕಾಗೋಷ್ಠಿಗೆ ಬರುತ್ತಿದ್ದಾರೆ. ಇದಕ್ಕೆ ಕಳೆದ ನ್ಯೂಜಿಲೆಂಡ್ ಸರಣಿ ಮತ್ತು ಇಂದಿನ ಸೋಲೂ ಉದಾಹರಣೆ.

ಇದನ್ನು ಗಮನಿಸಿರುವ ಅಭಿಮಾನಿಗಳು ಇದುವೇ ದ್ರಾವಿಡ್ ಅವರಿಗಿದ್ದ ಗ್ರೇಟ್ ನೆಸ್ ಎಂದಿದ್ದಾರೆ. ತಂಡ ಸೋತಾಗ ಕೋಚ್ ಆಗಿರುವ ಗಂಭೀರ್ ಜವಾಬ್ಧಾರಿ ತೆಗೆದುಕೊಳ್ಳುವುದು ಬಿಟ್ಟು ಪೆವಿಲಿಯನ್ ನಲ್ಲಿ ಅಡಗಿ ಕೂರುತ್ತಾರೆ ಎಂದು ನೆಟ್ಟಿಗರೊಬ್ಬರು ಟೀಕೆ ಮಾಡಿದ್ದಾರೆ. ಪ್ರತೀ ಬಾರಿಯೂ ರೋಹಿತ್ ಅವರೇ ಜವಾಬ್ಧಾರಿ ತೆಗೆದುಕೊಂಡು ಪತ್ರಿಕಾಗೋಷ್ಠಿಗೆ ಬರುತ್ತಾರೆ ಎಂದು ಅಭಿಮಾನಿಗಳು ಟೀಕಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ