IND vs AUS: ಸರಿಯಾದ ಟೈಮಲ್ಲೇ ಕೈ ಕೊಟ್ಟ ಕೆಎಲ್ ರಾಹುಲ್, ಇದಕ್ಕೆಲ್ಲಾ ಅವಳೇ ಕಾರಣವಂತೆ

Krishnaveni K

ಸೋಮವಾರ, 30 ಡಿಸೆಂಬರ್ 2024 (09:51 IST)
ಮೆಲ್ಬೊರ್ನ್: ಯಾವತ್ತೂ ಚೆನ್ನಾಗಿ ಆಡುವ ಕೆಎಲ್ ರಾಹುಲ್ ಇಂದು ಮತ್ತೊಮ್ಮೆ ತಕ್ಕ ಸಮಯದಲ್ಲೇ ಕೈ ಕೊಟ್ಟು ನೆಟ್ಟಿಗರ ಟೀಕೆಗೆ ಗುರಿಯಾಗಿದ್ದಾರೆ. ಜೊತೆಗೆ ರಾಹುಲ್ ವೈಫಲ್ಯಕ್ಕೆ ಅವಳೇ ಕಾರಣ ಎಂದು ಒಬ್ಬರ ಮೇಲೆ ಗೂಬೆ ಕೂರಿಸಿದ್ದಾರೆ.
 

ಆಸ್ಟ್ರೇಲಿಯಾ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ 330 ರನ್ ಗಳ ಗುರಿ ಬೆನ್ನತ್ತಿರುವ ಟೀಂ ಇಂಡಿಯಾ 112 ರನ್ ಗಳಿಗೆ ಪ್ರಮುಖ ಮೂರು  ವಿಕೆಟ್ ಕಳೆದುಕೊಂಡಿದೆ. ಆರಂಭಿಕರಾಗಿ ಕಣಕ್ಕಿಳಿದಿದ್ದ ನಾಯಕ ರೋಹಿತ್ ಶರ್ಮಾ, ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತೊಮ್ಮೆ ವೈಫಲ್ಯ ಮುಂದುವರಿಸಿದ್ದರೆ ರೋಹಿತ್ 9 ರನ್ ಗಳಿಸಿದರೆ ಕೊಹ್ಲಿ 5 ರನ್.

ಆದರೆ ಈ ಸರಣಿಯುದ್ದಕ್ಕೂ ಅದ್ಭುತ ಪ್ರದರ್ಶ ನೀಡುತ್ತಾ ಬಂದಿದ್ದ ಕೆಎಲ್ ರಾಹುಲ್ ಇಂದು ನಿಂತು ಆಡುವುದು ತಂಡಕ್ಕೆ ಅಗತ್ಯವಾಗಿತ್ತು. ಆದರೆ ರಾಹುಲ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದ್ದಾರೆ. ತಂಡಕ್ಕೆ ಅಗತ್ಯವಿರುವಾಗಲೇ ಕೈ ಕೊಡುತ್ತಾರೆ ಎಂದು ರಾಹುಲ್ ಮೇಲೆ ಮೊದಲಿನಿಂದಲೂ ಅಪವಾದವಿದೆ. ಅದನ್ನು ಅವರು ಮತ್ತೊಮ್ಮೆ ಸಮರ್ಥಿಸಿಕೊಂಡಂತಾಗಿದೆ.

ಕೆಎಲ್ ರಾಹುಲ್ ಆಡುವುದನ್ನು ನೋಡಲು ಅವರ ಪತ್ನಿ ಅಥಿಯಾ ಶೆಟ್ಟಿ ಬಂದಿದ್ದರು. ಅಥಿಯಾ ಬಂದಾಗಲೆಲ್ಲಾ ರಾಹುಲ್ ವಿಫಲರಾಗುತ್ತಾರೆ. ಇಂದೂ ಅಥಿಯಾ ಬಂದಿದ್ದಕ್ಕೇ ರಾಹುಲ್ ವಿಫಲರಾದರು ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಹಿಂದೊಮ್ಮೆ ಅಥಿಯಾ ಕೂಡಾ ಇದನ್ನೇ ಹೇಳಿದ್ದರು. ನಾನು ಮೈದಾನಕ್ಕೆ ಬಂದರೆ ರಾಹುಲ್ ಪ್ರದರ್ಶನ ನೀಡಲ್ಲ ಎಂಬ ನಂಬಿಕೆಯಿದೆ. ಮನೆಯಲ್ಲಿಯೂ ಒಂದೇ ಕಡೆಯಲ್ಲಿ ಕೂತು ಪಂದ್ಯ ವೀಕ್ಷಿಸುತ್ತೇನೆ. ಅದು ರಾಹುಲ್ ಗೆ ಅದೃಷ್ಟ ತರುತ್ತದೆ ಎಂಬ ನಂಬಿಕೆ ನನ್ನದು ಎಂದಿದ್ದರು. ಇದೀಗ ರಾಹುಲ್ ವಿಫಲರಾದ ಬೆನ್ನಲ್ಲೇ ನೆಟ್ಟಿಗರು ಅಥಿಯಾರನ್ನು ಇಟ್ಟುಕೊಂಡು ಟ್ರೋಲ್ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ