IND vs AUS: ಮಳೆಯಿಂದ ಆಟವಂತೂ ಹಾಳಾಯ್ತು, ಬಾ ತಿನ್ನೋಣ ಗುರು ಎಂದ ಕೆಎಲ್ ರಾಹುಲ್, ಕೊಹ್ಲಿ

Krishnaveni K

ಶನಿವಾರ, 14 ಡಿಸೆಂಬರ್ 2024 (14:36 IST)
Photo Credit: X
ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನ ಮಳೆಗೆ ಆಹುತಿಯಾಗಿದೆ. ಆದರೆ ಮಳೆಯ ನಡುವೆಯೂ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಗೆಳೆತನದ ಕ್ಷಣವೊಂದು ಎಲ್ಲರ ಗಮನ ಸೆಳೆದಿದೆ.

ಭಾರತೀಯ ಕಾಲಮಾನ ಪ್ರಕಾರ ಬೆಳಿಗ್ಗೆ 5 ಗಂಟೆಗೆ ಪಂದ್ಯ ಆರಂಭವಾಗಿದೆ. ಆದರೆ ಬೆಳಿಗ್ಗೆಯಿಂದಲೇ ಮಳೆ ಸುರಿಯಲಾರಂಭಿಸಿದೆ. ಕೇವಲ 13 ಓವರ್ ಗಳ ಆಟ ಮಾತ್ರ ಮೊದಲ ದಿನ ನಡೆದಿದೆ. ಮತ್ತೆ ಭಾರೀ ಮಳೆಯಿಂದಾಗಿ ಒಂದೇ ಒಂದು ಎಸೆತ ಕಾಣದೇ ಇಂದಿನ ದಿನದಾಟ ಮುಕ್ತಾಯವಾಗಿದೆ.

ಮಳೆ ನಿಲ್ಲಲು ಭಾರತೀಯ ಆಟಗಾರರು ಪೆವಿಲಿಯನ್ ನಲ್ಲಿ ಕಾಯುತ್ತಾ ಕೂತಿದ್ದರು. ಈ ವೇಳೆ ಕೆಎಲ್ ರಾಹುಲ್ ಒಂದು ಬಾಕ್ಸ್ ತಿಂಡಿ ತೆಗೆದುಕೊಂಡು ತಿನ್ನಲು ಕುಳಿತೇ ಬಿಟ್ಟರು. ಅವರ ಪಕ್ಕ ಕುಳಿತಿದ್ದ ವಿರಾಟ್ ಕೊಹ್ಲಿ ಕೂಡಾ ನನಗೂ ಕೊಡು ಎಂದು ಕೇಳಿ ತಿನ್ನುತ್ತಾ ಕೂತುಕೊಂಡರು.

ಬಳಿಕ ಇಬ್ಬರೂ ಕೂತು ಹರಟೆ ಹೊಡೆದುಕೊಂಡು ಬಾಳೆಹಣ್ಣು ಸವಿಯುತ್ತಾ ಕಾಲ ಕಳೆದಿದ್ದಾರೆ. ಈ ಕ್ಷಣಗಳು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ. ಇದನ್ನು ನೋಡಿ ನೆಟ್ಟಿಗರು ಈ ಹಿಂದೆ ಕೆಎಲ್ ರಾಹುಲ್ ಮತ್ತು ಕೊಹ್ಲಿ ಜೊತೆಯಾಗಿ ಕೂತು ಎಳೆನೀರು ಸವಿದ ಫೋಟೋಗಳನ್ನು ಹಂಚಿಕೊಂಡಿದ್ದು, ಈ ಗೆಳೆತನ ಹೀಗೇ ಮುಂದುವರಿಯಲಿ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ