IND vs AUS: ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ರಿಷಭ್ ಪಂತ್ (ವಿಡಿಯೋ)

Krishnaveni K

ಶನಿವಾರ, 4 ಜನವರಿ 2025 (12:34 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟಿಗ ರಿಷಭ್ ಪಂತ್ ಅತೀ ವೇಗದ ಅರ್ಧಶತಕ ಸಿಡಿಸಿದ್ದಾರೆ.

ಮೊದಲ ಇನಿಂಗ್ಸ್ ನಲ್ಲಿ ಭಾರತ 185 ರನ್ ಗಳಿಗೆ ಆಲೌಟ್ ಆಗಿದ್ದರೆ ಆಸೀಸ್ 181 ರನ್ ಗಳಿಗೆ ಆಲೌಟ್ ಆಗಿತ್ತು. ದ್ವಿತೀಯ ಇನಿಂಗ್ಸ್ ನಲ್ಲಿ ಭಾರತ ಇತ್ತೀಚೆಗಿನ ವರದಿ ಬಂದಾಗ 6 ವಿಕೆಟ್ ನಷ್ಟಕ್ಕೆ 138 ರನ್ ಗಳಿಸಿದೆ. ಈ ಪೈಕಿ ರಿಷಭ್ ಪಂತ್ ಒಬ್ಬರೇ 61 ರನ್ ಗಳ ಕೊಡುಗೆ ನೀಡಿದ್ದಾರೆ.

ದ್ವಿತೀಯ ಇನಿಂಗ್ಸ್ ನಲ್ಲಿ ಭಾರತದ ಆರಂಭ  ಉತ್ತಮವಾಗಿತ್ತು. ಆದರೆ 13 ರನ್ ಗಳಿಸಿ ಕೆಎಲ್ ರಾಹುಲ್ ಔಟಾದರೆ ಅವರ ಹಿಂದೆಯೇ 22 ರನ್ ಗಳಿಸಿದ ಯಶಸ್ವಿ ಜೈಸ್ವಾಲ್ ಕೂಡಾ ಔಟಾದರು. ಆ ಬಳಿಕ ಗಿಲ್ 13, ವಿರಾಟ್ ಕೊಹ್ಲಿ 6 ರನ್ ಗಳಿಸಿ ಬಹುಬೇಗನೇ ಪೆವಿಲಿಯನ್ ಸೇರಿಕೊಂಡರು.

ಈ ಹಂತದಲ್ಲಿ ಬಿರುಗಾಳಿಯ ಇನಿಂಗ್ಸ್ ಆಡಿದ ರಿಷಭ್ ಪಂತ್ ಕೇವಲ 29 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ದಾಖಲೆ ಮಾಡಿದರು. ಇದು ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ವೇಗದ ಅರ್ಧಶತಕವಾಗಿದ್ದು, ಎರಡು ಬಾರಿ ಈ ದಾಖಲೆ ಮಾಡಿದ ಕೀರ್ತಿ ರಿಷಭ್ ರದ್ದಾಯಿತು.

ಆದರೆ ದುರದೃಷ್ಟವಶಾತ್ ಅವರು ಹೆಚ್ಚುಹೊತ್ತು ನಿಲ್ಲಲ್ಲ. 33 ಎಸೆತಗಳಲ್ಲಿ 4 ಸಿಕ್ಸರ್, 6 ಬೌಂಡರಿಗಳೊಂದಿಗೆ 61 ರನ್ ಗಳಿಸಿದ್ದಾಗ ಪ್ಯಾಟ್ ಕುಮಿನ್ಸ್ ಗೆ ವಿಕೆಟ್ ಒಪ್ಪಿಸಿದರು.

Say stupid or anything rishabh Pant is rishabh Pant
54 runs in just 29 balls ????#RishabhPant #INDvsAUSTest pic.twitter.com/42H4eJpRQp

— Chandan (@ChandanIND63) January 4, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ