ವಿಶಾಖಪಟ್ಟಣಂ: ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯ ನಾಲ್ಕನೇ ದಿನದಾಟದಲ್ಲಿ ಟೀಂ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತು ಇಂಗ್ಲೆಂಡ್ ಬ್ಯಾಟಿಗ ಜಾನಿ ಬೇರ್ ಸ್ಟೋ ನಡುವಿನ ಚಕಮಕಿ ಎಲ್ಲರ ಗಮನ ಸೆಳೆಯಿತು.
ವಿರಾಟ್ ಕೊಹ್ಲಿ ಮೈದಾನದಲ್ಲಿದ್ದಾಗ ಎದುರಾಳಿಗಳನ್ನು ಕಿಚಾಯಿಸುತ್ತಿರುತ್ತಾರೆ. ಬಹುಶಃ ಅವರನ್ನು ಬಿಟ್ಟರೆ ಟೆಸ್ಟ್ ಕ್ರಿಕೆಟ್ ನಲ್ಲಿ ಡೀಸೆಂಟ್ ಆಗಿ ಎದುರಾಳಿಗಳನ್ನು ಕೆಣಕುವ ವ್ಯಕ್ತಿಯೆಂದರೆ ರವಿಚಂದ್ರನ್ ಅಶ್ವಿನ್. ಇಂದೂ ಕೂಡಾ ಅಶ್ವಿನ್ ಎದುರಾಳಿ ಬ್ಯಾಟಿಗ ಜಾನಿ ಬೇರ್ ಸ್ಟೋರನ್ನು ಕೆಣಕುವ ಪ್ರಯತ್ನ ಮಾಡಿದ್ದಾರೆ.
ಜಾನಿ ಬೇರ್ ಸ್ಟೋ ಔಟಾದಾಗ ಅಶ್ವಿನ್ ಬೇಕೆಂದೇ ಅವರ ಎದುರು ನಿಂತು ಸಂಭ್ರಮಿಸಿದ್ದಾರೆ. ಜಾನಿ ಬೇರ್ ಸ್ಟೋ ಕೂಡಾ ಅಶ್ವಿನ್ ಗೆ ದಿಟ್ಟಿಸಿ ನೋಡಿ ನಂತರ ಮಾತಿನ ಚಕಮಕಿ ನಡೆಸಿದ್ದಾರೆ. ಊಟದ ವಿರಾಮಕ್ಕೆ ಮೊದಲು ಕೊನೆಯ ಎಸೆತದಲ್ಲಿ ಬುಮ್ರಾ ಬೌಲಿಂಗ್ ನಲ್ಲಿ ಜಾನಿ ಬೇರ್ ಸ್ಟೋ ಔಟಾದರು. ಇತರೆ ಆಟಗಾರರು ಸಂಭ್ರಮಿಸುವಾಗ ಅಶ್ವಿನ್ ಬೇಕೆಂದೇ ಬೇರ್ ಸ್ಟೋ ಎದುರು ನಿಂತು ಸಂಭ್ರಮಿಸಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
500 ವಿಕೆಟ್ ಸನಿಹದಲ್ಲಿ ಅಶ್ವಿನ್
ಟೆಸ್ಟ್ ಕ್ರಿಕೆಟ್ ನಲ್ಲಿ 500 ವಿಕೆಟ್ ಗಳ ಗಡಿಯಲ್ಲಿ ರವಿಚಂದ್ರನ್ ಇದ್ದಾರೆ. ಇಂದಿನ ದಿನದಾಟದಲ್ಲಿ ಅಶ್ವಿನ್ ಇಂಗ್ಲೆಂಡ್ ಎರಡು ವಿಕೆಟ್ ಕಬಳಿಸಿದ್ದಾರೆ. ಇದರೊಂದಿಗೆ ಅವರ ವಿಕೆಟ್ ಗಳ ಸಂಖ್ಯೆ 499 ಕ್ಕೇರಿದೆ. ಇನ್ನೊಂದು ವಿಕೆಟ್ ಕಬಳಿಸಿದರೆ ಅವರು 500 ವಿಕೆಟ್ ಗಳ ಸರದಾರನಾಗಲಿದ್ದಾರೆ.
ಇದೀಗ ಭೋಜನ ವಿರಾಮ ಮುಗಿಸಿ ಇಂಗ್ಲೆಂಡ್ ಬ್ಯಾಟಿಂಗ್ ಆರಂಭವಾಗಿದ್ದು, ಇತ್ತೀಚೆಗಿನ ವರದಿ ಬಂದಾಗ 6 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿದೆ. ಭಾರತ ನೀಡಿದ 399 ರನ್ ಗಳ ಗುರಿಯಿಂದ ಇನ್ನೂ ರನ್ ಗಳ ಅಂತರದಲ್ಲಿದೆ.