ಹಿಟ್ ಮ್ಯಾನ್ ರೋಹಿತ್ ಶರ್ಮಾ ಬ್ಯಾಟ್ ಸಿಡಿಯೋದೇ ಅಪರೂಪ

Krishnaveni K

ಸೋಮವಾರ, 5 ಫೆಬ್ರವರಿ 2024 (08:20 IST)
ಹೈದರಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡೂ ಟೆಸ್ಟ್ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಟೀಕೆಗೊಳಗಾಗಿದ್ದಾರೆ.

ಮೊದಲ ಟೆಸ್ಟ್ ಪಂದ್ಯದಲ್ಲೂ ರೋಹಿತ್ ಸ್ಕೋರ್ ಅಷ್ಟಕ್ಕಷ್ಟೇ ಆಗಿತ್ತು. ಎರಡನೇ ಟೆಸ್ಟ್ ಪಂದ್ಯದಲ್ಲೂ ಅವರು ಸಂಪೂರ್ಣ ವೈಫಲ್ಯಕ್ಕೊಳಗಾಗಿದ್ದಾರೆ. ವಿರಾಟ್ ಕೊಹ್ಲಿಯಂತಹ ಪ್ರಮುಖರ ಅನುಪಸ್ಥಿತಿಯಲ್ಲಿ ರೋಹಿತ್ ತಂಡದ ಬ್ಯಾಟಿಂಗ್ ಜವಾಬ್ಧಾರಿ ಹೊರಬೇಕಿತ್ತು. ಆದರೆ ನಾಯಕರಾಗಿ ಅವರೇ ದಯನೀಯ ವೈಫಲ್ಯ ಅನುಭವಿಸುತ್ತಿರುವುದು ಟೀಕೆಗೆ ಗುರಿಯಾಗಿದೆ.

ಮೊದಲ ಎರಡು ಟೆಸ್ಟ್ ನಲ್ಲಿ ರೋಹಿತ್ ಸಾಧನೆ
ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ 24 ರನ್ ಗಳಿಸಿದ್ದ ರೋಹಿತ್ ಎರಡನೇ ಇನಿಂಗ್ಸ್ ನಲ್ಲಿ 39 ರನ್ ಗಳಿಸಿದ್ದರು. ಇದೀಗ ಎರಡನೇ ಪಂದ್ಯದಲ್ಲಿ ಮೊದಲ ಇನಿಂಗ್ಸ್ ನಲ್ಲಿ 14 ಮತ್ತು ಎರಡನೇ ಇನಿಂಗ್ಸ್ ನಲ್ಲಿ ಕೇವಲ 13 ರನ್ ಗೆ ವಿಕೆಟ್ ಒಪ್ಪಿಸಿದ್ದಾರೆ. ರೋಹಿತ್ ಮೇಲೆ ಬೇಕಾದ ಸಂದರ್ಭದಲ್ಲಿಯೇ ಕೈಕೊಡುವ ಅಪವಾದವಿದೆ. ಅದನ್ನು ಅವರು ಈ ಎರಡೂ ಪಂದ್ಯಗಳಲ್ಲಿ ಸಮರ್ಥಿಸಿಕೊಂಡಿದ್ದಾರೆ.

ಹೀಗಾಗಿಯೇ  ನೆಟ್ಟಿಗರು, ಮಾಜಿ ಕ್ರಿಕೆಟಿಗರು ಅವರನ್ನು ಇನ್ನಿಲ್ಲದಂತೆ ಟೀಕಿಸುತ್ತಿದ್ದಾರೆ. ರೋಹಿತ್ ಸೋಮಾರಿ ಎಂದು ಇಂಗ್ಲೆಂಡ್ ಮಾಜಿ ಕ್ರಿಕೆಟಿಗರು ಟೀಕಿಸಿದ್ದಾರೆ. ಇನ್ನು ಭಾರತೀಯ ಅಭಿಮಾನಿಗಳೇ ಟೆಸ್ಟ್ ನಲ್ಲಿ ಹಿಟ್ ಮ್ಯಾನ್ ಕತೆ ಮುಗಿಯಿತು. ಅವರು ಇನ್ನು ಬೇರೆಯವರಿಗೆ ಸ್ಥಾನ ಬಿಟ್ಟುಕೊಡಬಹುದು ಎನ್ನುತ್ತಿದ್ದಾರೆ. ಯಾಕೋ ಇತ್ತೀಚೆಗೆ ಹಿಟ್ ಮ್ಯಾನ್ ಬ್ಯಾಟ್ ಸಿಡಿಯೋದೇ ಅಪರೂಪವಾಗಿದೆ ಎಂದು ವ್ಯಂಗ್ಯ ಮಾಡುತ್ತಿದ್ದಾರೆ. ಆದರೆ ರೋಹಿತ್ ಕ್ಲಾಸ್ ಪ್ಲೇಯರ್ ಆಗಿದ್ದು, ಅವರು ಯಾವಾಗ ಬೇಕಾದರೂ ಕಮ್ ಬ್ಯಾಕ್ ಮಾಡಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ