IND vs NZ Test: ಚಿನ್ನಸ್ವಾಮಿ ಮೈದಾನದಲ್ಲಿ ಇಂದು ಕೈಗೆ ಸಿಕ್ಕ ಚಾನ್ಸ್ ಬಳಸಿಕೊಳ್ತಾರಾ ಕೆಎಲ್ ರಾಹುಲ್

Krishnaveni K

ಶನಿವಾರ, 19 ಅಕ್ಟೋಬರ್ 2024 (08:40 IST)
ಬೆಂಗಳೂರು: ತವರಿನ ಪ್ರೇಕ್ಷಕರ ಮುಂದೆ ಭರ್ಜರಿ ಬ್ಯಾಟಿಂಗ್ ಮಾಡುವುದು ಎಲ್ಲಾ ಕ್ರಿಕೆಟಿಗರ ಕನಸಾಗಿರುತ್ತದೆ. ಕೆಎಲ್ ರಾಹುಲ್ ರಿಂದಲೂ ಇಂದು ಬೆಂಗಳೂರಿನ ಪ್ರೇಕ್ಷಕರು ಇದನ್ನೇ ನಿರೀಕ್ಷೆ ಮಾಡುತ್ತಿದ್ದಾರೆ.

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ದ್ವಿತೀಯ ಇನಿಂಗ್ಸ್ ನಲ್ಲಿ ಭಾರತ ಮೂರನೇ ದಿನದಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 231 ರನ್ ಗಳಿಸಿದೆ. ಮೊದಲ ಇನಿಂಗ್ಸ್ ಹಿನ್ನಡೆ ದಾಟಲು ಭಾರತ ಇನ್ನೂ 125 ರನ್ ಗಳಿಸಬೇಕಿದೆ. ಆ ಬಳಿಕ ನ್ಯೂಜಿಲೆಂಡ್ ಗೆ ಪೈಪೋಟಿಕರ ಗೆಲುವಿನ ಗುರಿ ಹಾಕಿಕೊಡಬೇಕಿದೆ.

ಇದೆಲ್ಲಾ ಸುಲಭದ ಕೆಲಸವಲ್ಲ. ಆದರೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಈಗ ಲೋಕಲ್ ಹುಡುಗ ಕೆಎಲ್ ರಾಹುಲ್ ಮೇಲೆ ಅಪಾರ ನಿರೀಕ್ಷೆಯಿಟ್ಟುಕೊಂಡಿದ್ದಾರೆ. ಕೆಎಲ್ ರಾಹುಲ್ ಮತ್ತು ಸರ್ಫರಾಜ್ ಖಾನ್ ಇಂದು ಭರ್ಜರಿ ಬ್ಯಾಟಿಂಗ್ ನಡೆಸಿದರೆ ಭಾರತ ಈ ಪಂದ್ಯವನ್ನು ಸೇವ್ ಮಾಡಲು ಇನ್ನೂ ಅವಕಾಶವಿದೆ ಎಂಬ ನಂಬಿಕೆಯಲ್ಲಿದ್ದಾರೆ.

ಮೊದಲ ಇನಿಂಗ್ಸ್ ನಲ್ಲಿ ಶೂನ್ಯ ಸುತ್ತಿ ತವರಿನ ಪ್ರೇಕ್ಷಕರಿಗೆ ನಿರಾಸೆ ಉಂಟು ಮಾಡಿದ್ದ ಕೆಎಲ್ ರಾಹುಲ್ ಬಳಿಕ ಫೀಲ್ಡಿಂಗ್ ನಲ್ಲೂ ಕ್ಯಾಚ್ ಬಿಟ್ಟು ವಿಲನ್ ಆಗಿದ್ದರು. ಚಿನ್ನಸ್ವಾಮಿ ಪಿಚ್ ಬಗ್ಗೆ ರಾಹುಲ್ ಗಿಂತ ಚೆನ್ನಾಗಿ ಬಲ್ಲವರು ಯಾರಿದ್ದಾರೆ? ಹೀಗಾಗಿ ಇಂದು ಅವರು ಶತಕದ ಇನಿಂಗ್ಸ್ ಆಡಿ ತಂಡವನ್ನು ಕಾಪಾಡಿದರೆ ಹೀರೋ ಆಗಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ