ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಇನ್ನೂ 16 ಓವರ್ ಬಾಕಿಯಿರುವಾಗ ಮಂದ ಬೆಳಕಿನ ಕಾರಣ ಆಟ ಸ್ಥಗಿತಗೊಂಡಿದೆ.
ಇದಕ್ಕೂ ಮೊದಲು ಭಾರತದ ಸ್ಪಿನ್ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ ನಲ್ಲಿ 6 ವಿಕೆಟ್ ನಷ್ಟಕ್ಕೆ 236 ರನ್ ಗಳಿಸಿತ್ತು. ಪೀಟರ್ ಹ್ಯಾಂಡ್ಸ್ ಕಾಂಬ್ 28 ಮತ್ತು ಪ್ಯಾಟ್ ಕ್ಯುಮಿನ್ಸ್ 25 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು. ಭಾರತದ ಪರ ವೇಗಿಗಳು ವಿಕೆಟ್ ಅಷ್ಟೊಂದು ಪರಿಣಾಮ ಬೀರದೇ ಇದ್ದರೂ ಸ್ಪಿನ್ನರ್ ಗಳಾದ ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ತಲಾ 3 ಮತ್ತು 2 ವಿಕೆಟ್ ಕಬಳಿಸಿದರು.
ಆಸ್ಟ್ರೇಲಿಯಾ ಭಾರತದ ಮೊದಲ ಇನಿಂಗ್ಸ್ ಮೊತ್ತವಾದ 622 ರನ್ ಗಳ ಗುರಿ ತಲುಪಲು ಇನ್ನೂ 386 ರನ್ ಗಳಿಸಬೇಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ