ಢಾಕಾ: ಭಾರತ ಮತ್ತು ಪಾಕಿಸ್ತಾನದಂತೆ ಭಾರತ-ಬಾಂಗ್ಲಾದೇಶ ಕ್ರಿಕೆಟ್ ನಲ್ಲಿ ಪ್ರತ್ಯೇಕ ವೈರತ್ಯ, ಜಿದ್ದಾಜಿದ್ದಿನ ಹೋರಾಟವಿರುತ್ತದೆ.
ಇದೀಗ ಭಾರತ-ಬಾಂಗ್ಲಾ ನಡುವೆ ಇಂದಿನಿಂದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗುತ್ತಿದ್ದು ಮೊದಲ ಪಂದ್ಯ ಇಂದು ಢಾಕಾದಲ್ಲಿ ನಡೆಯಲಿದೆ.
ವಿಶ್ವಕಪ್ ಬಳಿಕ ರೋಹಿತ್ ಶರ್ಮಾ ನೇತೃತ್ವದ ಸೀನಿಯರ್ಸ್ ತಂಡ ಕಣಕ್ಕಿಳಿಯುತ್ತಿದೆ. ಟೀಂ ಇಂಡಿಯಾಗೆ ಹೋಲಿಸಿದರೆ ಬಾಂಗ್ಲಾ ದುರ್ಬಲ ತಂಡ. ಹಾಗಿದ್ದರೂ ಟಿ20 ವಿಶ್ವಕಪ್ ನಲ್ಲಿ ಭಾರತ ತಂಡಕ್ಕೆ ಶಕೀಬ್ ಅಲ್ ಹಸನ್ ಪಡೆ ಉತ್ತಮ ಪೈಪೋಟಿ ನೀಡಿತ್ತು. ಅದರಲ್ಲೂ ತವರಿನಲ್ಲಿ ಪಂದ್ಯ ನಡೆಯುತ್ತಿರುವ ಕಾರಣ ಬಾಂಗ್ಲಾ ಸ್ಪರ್ಧೆ ನೀಡುವುದು ಖಚಿತ.
ಶಿಖರ್ ಧವನ್-ರೋಹಿತ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿದರೆ ಕೆಎಲ್ ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಆಡಬೇಕಾಗಬಹುದು. ಸೂರ್ಯಕುಮಾರ್ ಯಾದವ್ ಈ ಸರಣಿಯಲ್ಲಿ ಇಲ್ಲದೇ ಇರುವುದರಿಂದ ಶ್ರೇಯಸ್ ಅಯ್ಯರ್, ಕೊಹ್ಲಿ, ರಿಷಬ್ ಪಂತ್ ಮೇಲೆ ಮಧ್ಯಮ ಕ್ರಮಾಂಕದ ಬಲ ಬೀಳಲಿದೆ.
ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಶಮಿ ಬಹಳ ದಿನಗಳ ನಂತರ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದ ಮೊಹಮ್ಮದ್ ಶಮಿ ಗಾಯದಿಂದ ಹೊರಗುಳಿದಿದ್ದು, ಮೊಹಮ್ಮದ್ ಸಿರಾಜ್ ಅವಕಾಶ ಪಡೆಯುವುದು ಖಚಿತ. ಈ ಪಂದ್ಯ ಮಧ್ಯಾಹ್ನ 11.30 ಕ್ಕೆ ಆರಂಭವಾಗಲಿದೆ.