ಮೊಹಮ್ಮದ್ ಶಮಿಗೆ ಗಾಯ: ಬಾಂಗ್ಲಾ ಸರಣಿಯಿಂದ ಔಟ್

ಶನಿವಾರ, 3 ಡಿಸೆಂಬರ್ 2022 (11:01 IST)
ಢಾಕಾ: ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಗೆ ಮೊದಲು ಟೀಂ ಇಂಡಿಯಾಗೆ ಮೊಹಮ್ಮದ್ ಶಮಿ ರೂಪದಲ್ಲಿ ಆಘಾತ ಸಿಕ್ಕಿದೆ.

ಮೊಹಮ್ಮದ್ ಶಮಿ ಭಾರತ ತಂಡದ ಜೊತೆಗೆ ಏಕದಿನ ಸರಣಿಗಾಗಿ ಬಾಂಗ್ಲಾಗೆ ಪ್ರಯಾಣ ಬೆಳೆಸಿದ್ದರು. ಆದರೆ ಅಭ‍್ಯಾಸದ ವೇಳೆ ಕೈಗೆ ಗಾಯ ಮಾಡಿಕೊಂಡಿದ್ದು, ಸರಣಿಯಿಂದ ಹೊರಬಿದ್ದಿದ್ದಾರೆ.

ಮೊಹಮ್ಮದ್ ಶಮಿ ಸ್ಥಾನಕ್ಕೆ ಯುವ ವೇಗಿ ಉಮ್ರಾನ್ ಮಲಿಕ್ ಗೆ ಬುಲಾವ್ ನೀಡಲಾಗಿದೆ. ವಿಶ್ವಕಪ್ ಗೆ ಮುನ್ನ ಶಮಿ ಗಾಯದಿಂದ ಚೇತರಿಸಿಕೊಂಡಿದ್ದರು. ಇದೀಗ ಮತ್ತೆ ಗಾಯದಿಂದಾಗಿ ಸರಣಿ ಆರಂಭಕ್ಕೂ ಮೊದಲೇ ಹೊರಬಿದ್ದಿರುವುದು ದುರಾದೃಷ್ಟವೇ ಸರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ