ಭಾರತ-ಬಾಂಗ್ಲಾ ಟೆಸ್ಟ್ ಪ್ರೇಕ್ಷಕರಿಗೆ ಟಿಕೆಟ್ ಹಣ ಹಿಂತಿರುಗಿಸಲಿರುವ ಕೋಲ್ಕೊತ್ತಾ ಕ್ರಿಕೆಟ್ ಮಂಡಳಿ

ಮಂಗಳವಾರ, 26 ನವೆಂಬರ್ 2019 (09:26 IST)
ಕೋಲ್ಕೊತ್ತಾ: ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆದ ಹೊನಲು ಬೆಳಕಿನ ಟೆಸ್ಟ್ ಪಂದ್ಯ ಕೇವಲ ಮೂರೇ ದಿನಕ್ಕೆ ಕೊನೆಗೊಂಡಿತ್ತು. ಇದರಿಂದ ನಷ್ಟವಾಗಿದ್ದು ಪ್ರೇಕ್ಷಕರಿಗೆ.


ನಾಲ್ಕು ಮತ್ತು ಐದನೇ ದಿನಕ್ಕೆ ಟಿಕೆಟ್ ಕಾದಿರಿಸಿದ್ದ ಅಭಿಮಾನಿಗಳಿಗೆ ಪಂದ್ಯವೇ ಇಲ್ಲದಿರುವುದರಿಂದ ಟಿಕೆಟ್ ಹಣ ನಷ್ಟವಾಗಿತ್ತು. ಆದರೆ ಆ ಹಣವನ್ನು ಇದೀಗ ಪ್ರೇಕ್ಷಕರಿಗೆ ಹಿಂತಿರುಗಿಸಲು ಕೋಲ್ಕೊತ್ತಾ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ.

ಸಾಮಾನ್ಯವಾಗಿ ಪಂದ್ಯಗಳು ಬೇಗನೇ ಮುಗಿದಾಗ ಆಯಾ ರಾಜ್ಯ ಕ್ರಿಕೆಟ್ ಸಂಸ್ಥೆ ಹಣ ರಿಫಂಡ್ ಮಾಡುತ್ತದೆ. ಇದೀಗ ಕೋಲ್ಕೊತ್ತಾ ಕ್ರಿಕೆಟ್ ಮಂಡಳಿಯೂ ಅದೇ ಕೆಲಸ ಮಾಡುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ