ಭಾರತ-ಬಾಂಗ್ಲಾ ಟೆಸ್ಟ್: ಶತಕದ ಹೊಸ್ತಿಲಲ್ಲಿ ಮಯಾಂಕ್ ಅಗರ್ವಾಲ್

ಶುಕ್ರವಾರ, 15 ನವೆಂಬರ್ 2019 (11:40 IST)
ಇಂಧೋರ್: ತನ್ನ ಭರ್ಜರಿ ಫಾರ್ಮ್ ಮುಂದುವರಿಸಿರುವ ಮಯಾಂಕ್ ಅಗರ್ವಾಲ್ ಭಾರತ ಮತ್ತು ಬಾಂಗ್ಲಾ ನಡುವಿನ ಮೊದಲ ಟೆಸ್ಟ್ ನ ದ್ವಿತೀಯ ದಿನದಲ್ಲಿ ಮತ್ತೊಂದು ಶತಕದ ಸನಿಹದಲ್ಲಿದ್ದಾರೆ.


ದ್ವಿತೀಯ ದಿನದ ಭೋಜನ ವಿರಾಮದ ವೇಳೆಗೆ ಟೀಂ ಇಂಡಿಯಾ 3 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿದೆ. ಬಾಂಗ್ಲಾ 150 ಕ್ಕೆ ಆಲೌಟ್ ಆಗಿತ್ತು. ಹೀಗಾಗಿ ಭಾರತ 38 ರನ್ ಗಳ ಮುನ್ನಡೆ ಗಳಿಸಿದೆ.

ಭಾರತದ ಪರ ಮಯಾಂಕ್ ಅಗರ್ವಾಲ್ 91 ರನ್ ಗಳಿಸಿ ಆಡುತ್ತಿದ್ದರೆ, ಅಜಿಂಕ್ಯಾ ರೆಹಾನೆ 35 ರನ್ ಗಳಿಸಿ ಆಡುತ್ತಿದ್ದಾರೆ. ನಿನ್ನೆ ಅಜೇಯರಾಗಿದ್ದ ಚೇತೇಶ್ವರ ಪೂಜಾರ ಇಂದು 54 ರನ್ ಗಳಿಸಿ ಔಟಾದರು. ಇನ್ನೊಂದೆಡೆ ವಿರಾಟ್ ಕೊಹ್ಲಿ ಶೂನ್ಯಕ್ಕೆ ನಿರ್ಗಮಿಸಿ ನಿರಾಸೆ ಮೂಡಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ