ಭಾರತ ಆಸ್ಟ್ರೇಲಿಯಾವನ್ನು ಒಂದನೇ ನಂಬರ್ ಸ್ಥಾನದಿಂದ ಉರುಳಿಸಬಹುದು

ಮಂಗಳವಾರ, 26 ಜುಲೈ 2016 (16:18 IST)
ಆಸ್ಟ್ರೇಲಿಯಾ ಈಗ ತಾನೇ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ದಂಡವನ್ನು ಗೆದ್ದಿರಬಹುದು. ಆದರೆ ಭಾರತ ಆಸೀಸ್ ತಂಡವನ್ನು ಒಂದನೇ ನಂಬರ್ ಸ್ಪಾಟ್‌ನಿಂದ ಉರುಳಿಸಬಹುದು. ವೆಸ್ಟ್ ಇಂಡೀಸ್ ತಂಡವನ್ನು ಅವರು 4-0ಯಿಂದ ಕ್ಲೀನ್ ಸ್ವೀಪ್ ಮಾಡಿ ಉಳಿದೆರಡು ಸರಣಿಯ ಫಲಿತಾಂಶ ಅದರ ಎಣಿಕೆಯಂತೆ ನಡೆದರೆ ಭಾರತಕ್ಕೆ ಇದು ಸಾಧ್ಯವಾಗುತ್ತದೆ.
 
 ಭಾರತ 4-0ಯಿಂದ ಸರಣಿ ಗೆದ್ದರೆ, ಇಂಗ್ಲೆಂಡ್ -ಪಾಕಿಸ್ತಾನ ಸರಣಿ ಡ್ರಾನಲ್ಲಿ ಅಂತ್ಯಗೊಂಡರೆ ಹಾಗೂ ಶ್ರೀಲಂಕಾ 1-0ಯಿಂದ ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆದ್ದರೆ, ಭಾರತ ಒಂದನೇ ನಂಬರ್ ಸ್ಥಾನಕ್ಕೆ ಜಿಗಿಯುತ್ತದೆ ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ.
ತಮ್ಮ ಸಮೀಪದಲ್ಲೇ ಸುಳಿದು ಪೈಪೋಟಿ ನೀಡುತ್ತಿರುವ ಭಾರತಕ್ಕೆ ಕಾಯಂ ಬಾಗಿಲನ್ನು ಮುಚ್ಚಲು , ಆಸ್ಟ್ರೇಲಿಯಾ ಶ್ರೀಲಂಕಾವನ್ನು 1-0ಯಿಂದ ಅಥವಾ ಅದಕ್ಕಿಂತ ಉತ್ತಮವಾಗಿ ಸೋಲಿಸಬೇಕು
.
ಇಂಗ್ಲೆಂಡ್ ಪಾಕ್ ವಿರುದ್ಧ ಕನಿಷ್ಟ ಒಂದು ಟೆಸ್ಟ್ ಗೆಲ್ಲಬೇಕು. ಏತನ್ಮಧ್ಯೆ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ತಮ್ಮ ತಂಡವನ್ನು ಎಂಆರ್‌ಎಫ್ ಟೈರ್ಸ್ ಐಸಿಸಿ ಟೆಸ್ಟ್ ಟೀಂ ಕ್ರಮಾಂಕದಲ್ಲಿ ಅಗ್ರ ಸ್ಥಾನಕ್ಕೆ ಮುನ್ನಡೆಸಿದ್ದಕ್ಕಾಗಿ ಐಸಿಸಿ ಚಾಂಪಿಯನ್ ಷಿಪ್ ದಂಡ ಮತ್ತು ಹತ್ತು ಲಕ್ಷ ಡಾಲರ್ ಬಹುಮಾನದ ಹಣವನ್ನು ಸ್ವೀಕರಿಸಿದರು.
 
ಐಸಿಸಿ ಚೀಫ್ ಎಕ್ಸಿಕ್ಯೂಟಿವ್ ಡೇವಿಡ್ ರಿಚರ್ಡ್‌ಸನ್ ಸ್ಮಿತ್‌ಗೆ ಈ ಬಹುಮಾನಗಳನ್ನು ನೀಡಿದರು.  ದಂಡವು ತಂಡದ ಶ್ರೇಷ್ಟತೆಯ ಸಂಕೇತವಾಗಿದ್ದು, ಕ್ರೀಡೆಯ ಕಠಿಣ ಮಾದರಿಯಲ್ಲಿ ಮನೋಜ್ಞ ಸಾಧನೆ ಮಾಡಿದ ತಂಡವನ್ನು ಗುರುತಿಸಲು ನೀಡುವ ಕೊಡುಗೆಯಾಗಿದೆ ಎಂದು ರಿಚರ್ಡ್‌ಸನ್ ಹೇಳಿದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ