ಭಾರತ-ಐರ್ಲೆಂಡ್ ಟಿ20 ಸರಣಿ: ಪಂದ್ಯದ ವಿವರ ಇಲ್ಲಿದೆ ನೋಡಿ

ಬುಧವಾರ, 27 ಜೂನ್ 2018 (10:17 IST)
ಲಂಡನ್: ಮಹತ್ವದ ಇಂಗ್ಲೆಂಡ್ ಸರಣಿಗೆ ಮೊದಲು ಟೀಂ ಇಂಡಿಯಾ ಐರ್ಲೆಂಡ್ ವಿರುದ್ಧ ಟಿ20 ಸರಣಿ ಆಡಲಿದ್ದು, ಇಂದಿನಿಂದ ಆರಂಭವಾಗಲಿದೆ.
 

ಇಂದು ಭಾರತೀಯ ಕಾಲಮಾನ ಪ್ರಕಾರ ರಾತ್ರಿ 8.30 ಕ್ಕೆ ಪಂದ್ಯ ಆರಂಭವಾಗಲಿದೆ. ಐರ್ಲೆಂಡ್ ಮಾಲಾಹೈಡ್ ಮೈದಾನದಲ್ಲಿ ಪಂದ್ಯ ನಡೆಯಲಿದೆ.

ಇಂದು ಮತ್ತು ಜೂನ್ 29 ಕ್ಕೆ ಇದೇ ಮೈದಾನದಲ್ಲಿ ಅಂತಿಮ ಪಂದ್ಯ ನಡೆಯಲಿದೆ. ಅದಾದ ಬಳಿಕ ಜುಲೈ 3 ರಿಂದ ಇಂಗ್ಲೆಂಡ್ ವಿರುದ್ಧ ಸರಣಿ ಆರಂಭವಾಗಲಿದೆ. ಪ್ರಬಲ ಟೀಂ ಇಂಡಿಯಾ ವಿರುದ್ಧ ಐರ್ಲೆಂಡ್ ಕ್ರಿಕೆಟ್ ಶಿಶುಗಳಾದರೂ, ಇಂಗ್ಲೆಂಡ್ ಸರಣಿಗೆ ಮೊದಲು ಅಭ್ಯಾಸ ಗಳಿಸಲು ಮತ್ತು ಟಿ20 ಮಾದರಿಯಲ್ಲಿ ರ್ಯಾಂಕಿಂಗ್ ಉತ್ತಮಪಡಿಸಲು ಭಾರತಕ್ಕೆ ಇದು ಉತ್ತಮ ಅವಕಾಶವಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ