ಅಂಡರ್ 19 ವಿಶ್ವಕಪ್: ಬಾಂಗ್ಲಾದೇಶಕ್ಕೆ ಚೊಚ್ಚಲ ವಿಶ್ವಕಪ್

ಸೋಮವಾರ, 10 ಫೆಬ್ರವರಿ 2020 (09:10 IST)
ಪೊಚೆಫ್ ಸ್ಟೂಮ್: ಹಿರಿಯ ಕ್ರಿಕೆಟಿಗರಿಂದಲೂ ಸಾಧ್ಯವಾಗದ ಸಾಧನೆಯನ್ನು ಬಾಂಗ್ಲಾದೇಶದ ಕಿರಿಯರು ಮಾಡಿ ತೋರಿಸಿದ್ದಾರೆ. ಚೊಚ್ಚಲ ಅಂಡರ್ 19 ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿದ್ದಾರೆ.

 
ಫೈನಲ್ ನಲ್ಲಿ ಭಾರತದ ವಿರುದ್ಧ ಬಾಂಗ್ಲಾದೇಶ ಹುಡುಗರು ಈ ಸಾಧನೆ ಮಾಡಿದ್ದು, ಇದುವರೆಗೆ ಯಾವುದೇ ಐಸಿಸಿ ವಿಶ್ವಕಪ್ ಗೆಲ್ಲದ ಬಾಂಗ್ಲಾ ಅಂಡರ್ 19 ವಿಶ್ವಕಪ್ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ಕೇವಲ 177 ರನ್ ಗೆ ಆಲೌಟ್ ಆಗಿತ್ತು. ಭಾರತದ ಪರ ಮತ್ತೆ ಸಿಡಿದ ಆರಂಭಿಕ ಯಶಸ್ವಿ ಜೈಸ್ವಾಲ್ 88 ರನ್ ಳಿಸಿದರೆ ತಿಲಕ್ ವರ್ಮ 38 ರನ್ ಗಳಿಸಿದ್ದರು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಬಾಂಗ್ಲಾ ಆರಂಭಿಕರು ಮತ್ತು ಕೆಳ ಕ್ರಮಾಂಕ ಬ್ಯಾಟ್ಸ್ ಮನ್ ಗಳ ಉತ್ತಮ ಬ್ಯಾಟಿಂಗ್ ನಿಂದಾಗಿ ಗೆಲುವಿನ ನಗೆ ಬೀರಿತು. ಕೊನೆಯ ಹಂತದಲ್ಲಿ ಮಳೆ ಬಂದು ಡಕ್ ವರ್ತ್ ಲೂಯಿಸ್ ನಿಯಮದ ಪ್ರಕಾರ ಬಾಂಗ್ಲಾ ಗೆಲುವಿಗೆ 46 ಓವರ್ ಗಳಲ್ಲಿ 170 ರನ್ ಗಳ ಗುರಿ ನಿಗದಿಯಾಯಿತು. ಅದ‍ನ್ನು ಬಾಂಗ್ಲಾ 42.1 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. 3 ವಿಕೆಟ್ ಗಳ ಗೆಲುವು ಸಾಧಿಸಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ