ಭಾರತ-ನ್ಯೂಜಿಲೆಂಡ್ ಪಂದ್ಯಕ್ಕೆ ಸೂರ್ಯ ಅಡ್ಡಿಯಾಗಲು ನಿಜ ಕಾರಣವೇನು ಗೊತ್ತಾ?
ಆ ಸಮಯದಲ್ಲಿ ಬ್ಯಾಟ್ಸ್ ಮನ್ ನ ಕಣ್ಣಿಗೆ ನೇರವಾಗಿ ಸೂರ್ಯನ ಪ್ರಖರ ಬೆಳಕು ಬೀಳುತ್ತಿತ್ತು. ಇದರಿಂದಾಗಿ ಚೆಂಡು ಕಾಣಿಸುತ್ತಿರಲಿಲ್ಲ. ಸಾಮಾನ್ಯವಾಗಿ ಕ್ರಿಕೆಟ್ ಮೈದಾನದಲ್ಲಿ ಪಿಚ್ ನ್ನು ಉತ್ತರ-ದಕ್ಷಿಣ ಅಭಿಮುಖವಾಗಿ ನಿರ್ಮಿಸಲಾಗುತ್ತದೆ. ಇದರಿಂದ ಎಷ್ಟೇ ಸೂರ್ಯನ ಬೆಳಕಿದ್ದರೂ ಬ್ಯಾಟ್ಸ್ ಮನ್ ಗಳಿಗೆ ತೊಂದರೆಯಾಗುವುದಿಲ್ಲ. ಆದರೆ ನೇಪಿಯರ್ ಅಂಗಣದಲ್ಲಿ ಪೂರ್ವ-ಪಶ್ಚಿಮಾಭಿಮುಖವಾಗಿ ಪಿಚ್ ನಿರ್ಮಿಸಿದ್ದೇ ಈ ಅವಾಂತರಕ್ಕೆ ಕಾರಣವಾಯಿತು.