ಅಕ್ಟೋಬರ್ ನಲ್ಲಿ ಭಾರತ-ವೆಸ್ಟ್ ಇಂಡೀಸ್ ಸರಣಿ: ಎಲ್ಲಿ ಯಾವಾಗ?

ಭಾನುವಾರ, 18 ಮಾರ್ಚ್ 2018 (09:17 IST)
ಮುಂಬೈ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಅಕ್ಟೋಬರ್ ಮತ್ತು ನವಂಬರ್ ಅವಧಿಯಲ್ಲಿ ಕ್ರಿಕೆಟ್ ಸರಣಿ ನಡೆಯಲಿದೆ ಎಂದು ಬಿಸಿಸಿಐ ಪ್ರಕಟಿಸಿದೆ.

ಭಾರತ ಪ್ರವಾಸ ಮಾಡಲಿರುವ ವಿಂಡೀಸ್ ತಂಡ ಇಲ್ಲಿ ಮೂರು ಟೆಸ್ಟ್, ಐದು ಏಕದಿನ ಮತ್ತು ಏಕೈಕ ಟಿ20 ಪಂದ್ಯವಾಡಲಿದೆ. ಟಿ20 ಪಂದ್ಯ ಕೋಲ್ಕೊತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯಲಿದೆ.

ಉಳಿದ ಪಂದ್ಯಗಳ ವೇಳಾಪಟ್ಟಿ ಮತ್ತು ಸ್ಥಳ ಇನ್ನೂ ನಿಗದಿಯಾಗಿಲ್ಲ.  2014 ರಲ್ಲಿ ಭಾರತ ಪ್ರವಾಸ ಮಾಡಿದ್ದ ವಿಂಡೀಸ್ ತಂಡ ಅದರ ನಂತರ ಇದೇ ಮೊದಲ ಬಾರಿಗೆ ಇಲ್ಲಿಗೆ ಆಗಮಿಸುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ            

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ