ಕೊರೋನಾ ಇಫೆಕ್ಟ್: ಭಾರತ-ವಿಂಡೀಸ್ ಕ್ರಿಕೆಟ್ ಸರಣಿಯಲ್ಲಿ ಬದಲಾವಣೆ

ಭಾನುವಾರ, 23 ಜನವರಿ 2022 (10:15 IST)
ಮುಂಬೈ: ದೇಶದಲ್ಲಿ ಪ್ರಸ್ತುತ ಕೊರೋನಾ ಸಂಖ್ಯೆ ಹೆಚ್ಚಿರುವ ಕಾರಣ ಮುಂಬರುವ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಮತ್ತು ಟಿ20 ಸರಣಿಯ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ.

ಮೂರು ಏಕದಿನ ಮತ್ತು ಟಿ20 ಪಂದ್ಯಗಳ ಸರಣಿಯನ್ನು ಆರು ತಾಣಗಳಲ್ಲಿ ನಡೆಸಲು ಬಿಸಿಸಿಐ ಈ ಮೊದಲು ನಿರ್ಧರಿಸಿತ್ತು. ಆದರೆ ಈಗ ಕೊರೋನಾ ಪ್ರಕರಣಗಳು ಹೆಚ್ಚಾಗಿರುವುದರಿಂದ ಕೇವಲ ಎರಡೇ ತಾಣಗಳಲ್ಲಿ ಪಂದ್ಯ ನಡೆಸಲು ತೀರ್ಮಾನಿಸಿದೆ.

ಹೀಗಾಗಿ ಕೋಲ್ಕೊತ್ತಾದ ಈಡನ್ ಗಾರ್ಡನ್ ನಲ್ಲಿ ಟಿ20 ಸರಣಿ ಮತ್ತು ಅಹಮ್ಮದಾಬಾದ್ ನ ನರೇಂದ್ರಮೋದಿ ಮೈದಾನದಲ್ಲಿ ಏಕದಿನ ಸರಣಿಯ ಪಂದ್ಯಗಳು ನಡೆಯಲಿದೆ. ಅಲ್ಲದೆ, ಐಪಿಎಲ್ ಹರಾಜು ಪ್ರಕ್ರಿಯೆ ಇರುವ ಕಾರಣಕ್ಕೆ ಫೆಬ್ರವರಿ 12 ರಂದು ನಡೆಯಬೇಕಿದ್ದ ಏಕದಿನ ಪಂದ್ಯ ಫೆಬ್ರವರಿ 11 ರಂದು ನಡೆಯಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ