ಶೂನ್ಯಕ್ಕೆ ಔಟಾಗಿ ದ್ರಾವಿಡ್ ದಾಖಲೆ ಹಿಂದಿಕ್ಕಿದ ವಿರಾಟ್ ಕೊಹ್ಲಿ
ಏಕದಿನ ಪಂದ್ಯಗಳಲ್ಲಿ ಕೊಹ್ಲಿ 14 ನೇ ಬಾರಿಗೆ ಶೂನ್ಯಕ್ಕೆ ಔಟಾಗಿ ಬೇಡದ ಸಾಧನೆ ಮಾಡಿದರು. ಈ ಮೂಲಕ ಏಕದಿನ ಪಂದ್ಯಗಳಲ್ಲಿ ಗರಿಷ್ಠ ಶೂನ್ಯ ಸಂಪಾದಿಸಿದ ಆಟಗಾರರ ಪಟ್ಟಿಯಲ್ಲಿ ರಾಹುಲ್ ದ್ರಾವಿಡ್ ರನ್ನು ಹಿಂದಿಕ್ಕಿದ್ದರು.ದ್ರಾವಿಡ್, ಕಪಿಲ್ ದೇವ್ 13 ಬಾರಿ ಶೂನ್ಯಕ್ಕೆ ಔಟಾಗಿದ್ದರು.
ಈ ಪಂದ್ಯದಲ್ಲಿ 5 ಎಸೆತ ಎದುರಿಸಿದ ವಿರಾಟ್ ಕೊಹ್ಲಿ, ಕೇಶವ್ ಮಹಾರಾಜ್ ಬೌಲಿಂಗ್ ನಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ.