ಟೀಂ ಇಂಡಿಯಾಕ್ಕಿಂದ ಮಾನ ಉಳಿಸಿಕೊಳ್ಳಲು ಕೊನೇ ಚಾನ್ಸ್
ಈ ಪಂದ್ಯವನ್ನೂ ಸೋತರೆ ಟೀಂ ಇಂಡಿಯಾ ವೈಟ್ ವಾಶ್ ಅವಮಾನಕ್ಕೀಡಾಗಲಿದೆ. ಕೆಎಲ್ ರಾಹುಲ್ ನೇತೃತ್ವದ ಪಡೆ ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ಇನ್ನೂ ಹೊರತಂದಿಲ್ಲ.
ಅದರಲ್ಲೂ ಮುಖ್ಯವಾಗಿ ಮಧ್ಯಮ ಕ್ರಮಾಂಕದ ಬ್ಯಾಟಿಗರಿಂದ ಉತ್ತಮ ಜೊತೆಯಾಟ ಬರುತ್ತಿಲ್ಲ. ಇದರಿಂದ ನಿರೀಕ್ಷಿಸಿದಷ್ಟು ರನ್ ಪೇರಿಸಲು ಸಾಧ‍್ಯವಾಗುತ್ತಿಲ್ಲ. ಅಲ್ಲದೆ, ಬೌಲರ್ ಗಳದ್ದೂ ಇದೇ ಕತೆ. ದ.ಆಫ್ರಿಕಾ ಬ್ಯಾಟಿಂಗ್ ಲೈನ್ ಅಪ್ ಗೆ ಸವಾಲು ಹಾಕಲು ಸಾಧ‍್ಯವಾಗಿಲ್ಲ. ವೇಗಿಗಳ ಜೊತೆಗೆ ಸ್ಪಿನ್ನರ್ ಗಳದ್ದೂ ದಯನೀಯ ವೈಫಲ್ಯ. ಹೀಗಾಗಿ ಭಾರತ ಈ ಪಂದ್ಯವನ್ನು ಗೆಲ್ಲಬೇಕಾದರೆ ಎಲ್ಲಾ ವಿಭಾಗದಲ್ಲೂ ಅತ್ಯುತ್ತಮ ಪ್ರದರ್ಶನ ಹೊರತರಲೇಬೇಕು. ಈ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ.