3ನೇ ಏಕದಿನ ಪಂದ್ಯದಲ್ಲೂ 5 ವಿಕೆಟ್`ಗಳ ಭರ್ಜರಿ ಜಯ: ಸರಣಿ ಕೈವಶ ಮಾಡಿಕೊಂಡ ಭಾರತ

ಭಾನುವಾರ, 24 ಸೆಪ್ಟಂಬರ್ 2017 (22:17 IST)
ಇಂದೋರ್`ನಲ್ಲಿ ಆಸ್ಟ್ರೇಲಿಯಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ 5 ವಿಕೆಟ್`ಗಳಿಂದ ಜಯ ಗಳಿಸುವ ಮೂಲಕ ಭಾರತ ತಂಡ 5 ಪಂದ್ಯಗಳ ಏಕದಿನ ಸರಣಿಯನ್ನ 3-0 ಅಂತರದಿಂದ ಕೈವಶ ಮಾಡಿಕೊಂಡಿದೆ. 5 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ತಂಡ ಹ್ಯಾಟ್ರಿಕ್ ವಿಜಯದ ಮೂಲಕ ಸರಣಿ ಗೆದ್ದುಕೊಂಡಿದ್ದು, ಉಳಿದೆರಡು ಪಂದ್ಯಗಳು ಔಪಚಾರಿಕವಾಗಲಿವೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ನಿಗದಿತ 50 ಓವರ್`ಗಳಲ್ಲಿ  ಆರೋನ್ ಫಿಂಚ್ ಅವರ ಶತಕ(124)ದ ನೆರವಿನಿಂದ 293 ರನ್`ಗಳ ಬೃಹತ್ ಮೊತ್ತ ಕಲೆ ಹಾಕಿತು. ಫಿಂಚ್ ಮತ್ತು ಸ್ಟೀವನ್ ಸ್ಮಿತ್ ಆಡುವಾಗ ಆಸೀಸ್ 300ರ ಗಡಿ ದಾಟುವ ಎಲ್ಲ ಸೂಚನೆ ಇತ್ತು. ಆದರೆ, ಅಂತಿಮ ಹಂತದಲ್ಲಿ ವಿಕೆಟ್`ಗಳು ಪಟಪಟನೆ ಉರುಳಿದ್ದರಿಂದ 293 ರನ್`ಗಳಿಗೆ ತೃಪ್ತಿಪಡಬೇಕಾಯ್ತು. 

ಇದನ್ನೂ ಓದಿ.. ಸೆಕ್ಸ್ ಮಾಡು ಎಂದು ಪೀಡಿಸುತ್ತಿದ್ದ ಆಂಟಿಯನ್ನ ಬರ್ಬರವಾಗಿ ಕೊಂದ ಯುವಕ

294 ರನ್`ಗಳ ಗುರಿ ಬೆನ್ನತ್ತಿದ ಭಾರತ ತಂಡಕ್ಕೆ ರೋಹಿತ್ ಶರ್ಮಾ ಮತ್ತು ಅಜಿಂಕ್ಯ ರಹಾನೆ ಉತ್ತಮ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್`ಗೆ 139 ರನ್`ಗಳ ಜೊತೆಯಾಟ ನೀಡಿತು. ರೋಹಿತ್ ಶರ್ಮಾ 71, ಅಜಿಂಕ್ಯ ರಹಾನೆ 79 ರನ್ ಗಳಿಸುವ ಮೂಲಕ ಭದ್ರ ಬುನಾದಿ ಹಾಕಿಕೊಟ್ಟರು. ಬಳಿಕ ಆರಂಭವಾಗಿದ್ದೇ ಪಾಂಡ್ಯಾ ಆಟ. ನಾಯಕ ಕೊಹ್ಲಿ ಜೊತೆ ಸೇರಿಕೊಂಡ ಹಾರ್ದಿಕ್ ಪಾಂಡ್ಯಾ ಆಸೀಸ್ ಬೌಲರ್`ಗಳನ್ನ ಬೆಂಡೆತ್ತಿದರು. 5 ಬೌಂಡರಿ, 4 ಸಿಕ್ಸರ್ ಸಹಿತ 78 ರನ್ ಸಿಡಿಸಿ ತಂಡವನ್ನ ಗೆಲುವಿನ ದಡಕ್ಕೆ ಸೇರಿಸಿದರು. ಅಂತಿಮವಾಗಿ ಭಾರತ ತಂಡ .5 ಓವರ್`ಗಳಲ್ಲಿ 294 ರನ್ ಗಳಿಸುವ ಮೂಲಕ ಗೆಲುವಿನ ಪತಾಕೆ ಹಾರಿಸಿತು. ಹಾರ್ದಿಕ್ ಪಾಂಡ್ಯಾ ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ