ಏಷ್ಯನ್ ಗೇಮ್ಸ್ ಕ್ರಿಕೆಟ್: ಭಾರತೀಯ ಮಹಿಳೆಯರ ಭರ್ಜರಿ ಬ್ಯಾಟಿಂಗ್
ಮಳೆಯಿಂದಾಗಿ 15 ಓವರ್ ಗಳಿಗೆ ಪಂದ್ಯ ಕಡಿತ ಮಾಡಲಾಗಿದೆ. ಟಾಸ್ ಗೆದ್ದ ಮಲೇಷ್ಯಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಗಿಳಿದ ಭಾರತಕ್ಕೆ ಸ್ಮೃತಿ ಮಂಧನಾ-ಶಫಾಲಿ ವರ್ಮ ಜೋಡಿ ಉತ್ತಮ ಆರಂಭ ನೀಡಿತು. ಆದರೆ ಸ್ಮೃತಿ 16 ಎಸೆತಗಳಿಂದ 27 ರನ್ ಗಳಿಸಿ ಔಟಾದರು.
ಆದರೆ ಶಫಾಲಿ ವರ್ಮ 39 ಎಸೆತಗಳಿಂದ 5 ಸಿಕ್ಸರ್ ಸಹಿತ 67 ರನ್ ಗಳಿಸಿ ಔಟಾದರು. ಅವರಿಗೆ ತಕ್ಕ ಸಾಥ್ ನೀಡಿದ ಜೆಮಿಮಾ ರೊಡ್ರಿಗಸ್ 29 ಎಸೆತಗಳಿಂದ ಅಜೇಯ 47 ರನ್ ಗಳಿಸಿದರು. ಕೊನೆಯಲ್ಲಿ ಬಂದ ರಿಚಾ ಘೋಷ್ ಕೇವಲ 7 ಎಸೆತಗಳಿಂದ 21 ರನ್ ಚಚ್ಚಿದರು. ಅಂತಿಮವಾಗಿ ಭಾರತ 15 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿ ಎದುರಾಳಿಗೆ ಗೆಲ್ಲಲು 174 ರನ್ ಗಳ ಬೃಹತ್ ಗುರಿ ನೀಡಿದೆ.