ಕೊರೋನಾದಿಂದ ಟಿ20 ವಿಶ್ವಕಪ್ ಆಯೋಜನೆ ಸಾಧ್ಯವಾಗಲ್ಲ ಎಂದಾದರೆ ಐಪಿಎಲ್ ಹೇಗಾಗುತ್ತದೆ?!

ಮಂಗಳವಾರ, 7 ಜುಲೈ 2020 (09:08 IST)
ಇಸ್ಲಾಮಾಬಾದ್: ಅಕ್ಟೋಬರ್ ನಲ್ಲಿ ನಡೆಯಬೇಕಿರುವ ಟಿ20 ವಿಶ್ವಕಪ್ ಕೂಟವನ್ನು ಕೊರೋನಾ ಕಾರಣದಿಂದ ಮುಂದೂಡಲಾಗುತ್ತದೆ ಎಂಬ ಸುದ್ದಿಗಳಿವೆ. ಈ ಬಗ್ಗೆ ಐಸಿಸಿ ಅಧಿಕೃತ ಹೇಳಿಕೆ ಬರುವುದೊಂದೇ ಬಾಕಿ.

 

ಆದರೆ ಈ ಸಮಯವನ್ನು ಸದುಪಯೋಗಪಡಿಸಿಕೊಂಡು ಬಿಸಿಸಿಐ ಐಪಿಎಲ್ ಆಯೋಜಿಸಲು ಯೋಜನೆ ಹಾಕಿಕೊಂಡಿದೆ. ಆದರೆ ಇದಕ್ಕೆ ಪಾಕ್ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಆಕ್ಷೇಪಿಸಿದ್ದಾರೆ.

‘ವಿಶ್ವಕಪ್ ಆಯೋಜನೆ ಸಾಧ‍್ಯವಿಲ್ಲ ಎಂದಾದರೆ ಅದೇ ಸಮಯದಲ್ಲಿ ಅದೇ ಸಮಯದಲ್ಲಿ ಐಪಿಎಲ್ ಹೇಗೆ ಆಯೋಜಿಸುತ್ತಾರೆ? ಬಿಸಿಸಿಐ ಪ್ರಬಲ ಕ್ರಿಕೆಟ್ ಸಂಸ್ಥೆ. ಹೀಗಾಗಿ ಅದು ಅಂದುಕೊಂಡಿದ್ದು ನಡೆಯುತ್ತದೆ. ಒಂದು ವೇಳೆ ಆಸ್ಟ್ರೇಲಿಯಾಕ್ಕೆ ವಿಶ್ವಕಪ್ ಆಯೋಜಿಸುವುದು ಸಾಧ್ಯವಾಗುತ್ತಿಲ್ಲ ಎಂದಾದರೆ ಅದನ್ನು ಒಪ್ಪಿಕೊಳ್ಳೋಣ. ಆದರೆ ಅದೇ ಸಮಯದಲ್ಲಿ ಐಪಿಎಲ್ ಹೇಗೆ ಆಯೋಜಿಸುತ್ತಾರೆ ಎಂಬ ಪ್ರಶ್ನೆ ಉದ್ಭವವಾಗುತ್ತದೆ’ ಎಂದು ಇಂಜಮಾಮ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ