ಐಪಿಎಲ್ 2023: ಸಿಎಸ್ ಕೆ 10 ನೇ ಬಾರಿಗೆ ಫೈನಲ್ ಗೆ
ಧೋನಿ ಪಡೆ ಮೊದಲು ಬ್ಯಾಟಿಂಗ್ ಮಾಡಿ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತು. ಋತುರಾಜ್ ಗಾಯಕ್ ವಾಡ್ 60, ಕಾನ್ವೇ 40 ರನ್ ಗಳಿಸಿದರು. ಈ ಮೊತ್ತವನ್ನು ಗುಜರಾತ್ ಸುಲಭವಾಗಿ ಬೆನ್ನತ್ತಬಹುದು ಎಂದೇ ಎಲ್ಲರ ನಿರೀಕ್ಷೆಯಾಗಿತ್ತು.
ಆದರೆ ಸಿಎಸ್ ಕೆ ತನ್ನ ಸ್ಪಿನ್ ಶಕ್ತಿ ಬಳಸಿ ಎದುರಾಳಿಗಳನ್ನು ನಿಯಂತ್ರಿಸಿತು. ದೀಪಕ್ ಚಹರ್ ಶುಬ್ನಮ್ ಗಿಲ್ ರನ್ನು 42 ರನ್ ಗಳಿಸಿದ್ದಾಗ ಔಟ್ ಮಾಡಿದ್ದರಿಂದ ಗುಜರಾತ್ ಗೆ ಹೆಚ್ಚೇನೂ ಮಾಡಲಾಗಲಿಲ್ಲ. ಹಾಗಿದ್ದರೂ ಕೊನೆಯಲ್ಲಿ ರಶೀದ್ ಖಾನ್ ಸಿಎಸ್ ಕೆ ಭಯ ಹುಟ್ಟಿಸಿದರಾದರೂ ಅವರ ಇನಿಂಗ್ಸ್ 30 ರನ್ ಗೆ ಕೊನೆಯಾಯಿತು. ರವೀಂದ್ರ ಜಡೇಜಾ ಅದ್ಭುತ ಸ್ಪೆಲ್ ಮಾಡಿ 2 ವಿಕೆಟ್ ಕಬಳಿಸಿದರು. ಇದರೊಂದಿಗೆ ಗುಜರಾತ್ 20 ಓವರ್ ಗಳಲ್ಲಿ 157 ರನ್ ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು. ಇದೀಗ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಇಂದು ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡದೊಂದಿಗೆ ಆಡಲಿದೆ.