ಲಕ್ನೋ ತಂಡದ ಸೋಲು ಸಂಭ್ರಮಿಸಿದರಾ ವಿರಾಟ್ ಕೊಹ್ಲಿ?!

ಮಂಗಳವಾರ, 9 ಮೇ 2023 (07:40 IST)
ಮುಂಬೈ: ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್ ಜೊತೆಗಿನ ವಿರಾಟ್ ಕೊಹ್ಲಿ ವೈಮನಸ್ಯ ಮೈದಾನದಾಚೆಗೂ ತಲುಪಿದೆ.

ಮೊನ್ನೆಯಷ್ಟೇ ಲಕ್ನೋ-ಆರ್ ಸಿಬಿ ಪಂದ್ಯದ ಬಳಿಕ ಕೊಹ್ಲಿ-ಗೌತಮ್ ಗಂಭೀರ್ ನಡುವೆ ನಡೆದಿದ್ದ ಮಾತಿನ ಚಕಮಕಿ ಭಾರೀ ಸದ್ದು ಮಾಡಿತ್ತು. ಇದರಿಂದಾಗಿ ಲಕ್ನೋ ಮತ್ತು ಆರ್ ಸಿಬಿ ಫ್ಯಾನ್ಸ್ ನಡುವೆ ಕದನ ಕಾವೇರಿದೆ.

ಇದೀಗ ಮೊನ್ನೆ ಗುಜರಾತ್ ಮತ್ತು ಲಕ್ನೋ ನಡುವಿನ ಪಂದ್ಯವನ್ನು ಕೊಹ್ಲಿ ವೀಕ್ಷಿಸಿದ್ದಾರೆ. ಬಳಿಕ ಲಕ್ನೋ ವಿರುದ್ಧ ಗುಜರಾತ್ ಆಟಗಾರರ ಪ್ರದರ್ಶನವನ್ನು ಸಂಭ್ರಮಿಸಿದ್ದಾರೆ. ಲಕ್ನೋ ವಿರುದ್ಧ ಭರ್ಜರಿ ಬ್ಯಾಟಿಂಗ್ ನಡೆಸಿದ್ದ ವೃದ್ಧಿಮಾನ್ ಸಹಾ ಮತ್ತು ಅದ್ಭುತ ಕ್ಯಾಚ್ ಪಡೆದಿದ್ದ ರಶೀದ್ ಖಾನ್ ರನ್ನು ಅಭಿನಂದಿಸಿರುವ ಕೊಹ್ಲಿ ಈ ಮೂಲಕ ಲಕ್ನೋ ಸೋಲನ್ನು ಸಂಭ್ರಮಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ