ಐಪಿಎಲ್ 2023 ಫೈನಲ್: ಗಿಲ್ ಆಗಿ ಬದಲಾದ ಸಾಯಿ ಸುದರ್ಶನ್!

ಸೋಮವಾರ, 29 ಮೇ 2023 (21:21 IST)
ಅಹಮ್ಮದಾಬಾದ್: ಐಪಿಎಲ್ 2023 ರ ಫೈನಲ್ ಪಂದ್ಯ ಗುಜರಾತ್ ಮತ್ತು ಚೆನ್ನೈ ನಡುವೆ ನಡೆಯುತ್ತಿದ್ದು, ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 214 ರನ್ ಗಳಿಸಿದೆ.

ಇದೀಗ ಚೆನ್ನೈ ಗೆಲುವಿಗೆ 215 ರನ್ ಗಳಿಸಬೇಕಿದೆ. ಇಂದು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಗೆ ಎಂದಿನಂತೆ ಓಪನರ್ ಶುಬ್ಮನ್ ಗಿಲ್, ವೃದ್ಧಿಮಾನ್ ಸಹಾ ಉತ್ತಮ ಆರಂಭ ನೀಡಿದರು. ಆದರೆ ಪ್ರತೀ ಬಾರಿ ದೊಡ್ಡ ಮೊತ್ತ ಗಳಿಸಿ ಗುಜರಾತ್ ಗೆ ದೊಡ್ಡ ಮೊತ್ತ ಗಳಿಸಿಕೊಡುತ್ತಿದ್ದ ಗಿಲ್ ಇಂದು 39 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಆದರೆ ಇನ್ನೊಂದೆಡೆ ನೆಲಕಚ್ಚಿ ನಿಂತ ವೃದ್ಧಿಮಾನ್ ಸಹಾ 39 ಎಸೆತಗಳಿಂದ 54 ರನ್ ಗಳಿಸಿ ಔಟಾದರು.

ಇಷ್ಟರಲ್ಲೇ ಸಾಯಿ ಸುದರ್ಶನ್ ಅಬ್ಬರ ಶುರುವಾಗಿತ್ತು. ಇಂದು ಶುಬ್ಮನ್ ಗಿಲ್ ಪಾತ್ರ ನಿಭಾಯಿಸಿದ ಸಾಯಿ ಸುದರ್ಶನ್ 47 ಎಸೆತಗಳಿಂದ 96 ಭರ್ಜರಿ ರನ್ ಗಳಿಸಿ ತಂಡದ ಮೊತ್ತ 200 ರ ಗಡಿ ದಾಟಿಸಲು ನೆರವಾದರು. ಚೆನ್ನೈ ಬೌಲರ್ ಗಳನ್ನು ಮನಸೋ ಇಚ್ಛೆ ದಂಡಿಸಿದ ಸುದರ್ಶನ್ ಅವರ ಇನಿಂಗ್ಸ್ ನಲ್ಲಿ 8 ಸಿಕ್ಸರ್, 6 ಬೌಂಡರಿ ಸೇರಿತ್ತು. ಆದರೆ ಶತಕ ಪೂರೈಸಲಾಗದೇ ಔಟಾಗಿ ನಿರಾಸೆ ಅನುಭವಿಸಿದರು. ನಾಯಕ ಹಾರ್ದಿಕ್ ಪಾಂಡ್ಯ ರನ್ ಗಳಿಸಿದರು. ಚೆನ್ನೈ ಪರ ದೀಪಕ್ ಚಹರ್ 1, ರವೀಂದ್ರ ಜಡೇಜಾ 1 ವಿಕೆಟ್, ಪತಿರಾನ್ 2 ವಿಕೆಟ್ ತಮ್ಮದಾಗಿಸಿಕೊಂಡರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ