ಐಪಿಎಲ್ ಫೈನಲ್ ನಲ್ಲಿ ಧೋನಿ ನೋಡಲು ಬಂದು ರೈಲ್ವೇ ಸ್ಟೇಷನ್ ನಲ್ಲಿ ನಿದ್ರಿಸಿದ ಫ್ಯಾನ್ಸ್!

ಸೋಮವಾರ, 29 ಮೇ 2023 (09:01 IST)
Photo Courtesy: Twitter
ಅಹಮ್ಮದಾಬಾದ್: ಮಳೆ ಸುರಿಯದೇ ಇದ್ದಿದ್ದರೆ ನಿನ್ನೆ ಐಪಿಎಲ್ 2023 ರ ಫೈನಲ್ ಪಂದ್ಯ ಮುಕ್ತಾಯವಾಗಬೇಕಿತ್ತು. ಅದಕ್ಕೆಂದೇ ದೇಶದ ನಾನಾ ಭಾಗಗಳಿಂದ ಅಭಿಮಾನಿಗಳು ಅಹಮ್ಮದಾಬಾದ್ ಗೆ ಬಂದಿಳಿದಿದ್ದರು.

ಆದರೆ ನಿನ್ನೆ ಮಳೆ ಸುರಿದಿದ್ದರಿಂದ ಪಂದ್ಯ ಇಂದಿಗೆ ಮುಂದೂಡಿಕೆಯಾಗಿದೆ. ನಿನ್ನೆ ಟಿಕೆಟ್ ಖರೀದಿ ಮಾಡಿದ್ದವರು ಇಂದು ಅದೇ ಟಿಕೆಟ್ ನಲ್ಲಿ ಪಂದ್ಯ ವೀಕ್ಷಿಸಬಹುದಾಗಿದೆ. ಆದರೆ ದೂರದ ಊರುಗಳಿಂದ ಬಂದಿದ್ದ ಫ್ಯಾನ್ಸ್ ಗೆ ನೆಲೆ ಇಲ್ಲದಂತಾಗಿತ್ತು.

ಧೋನಿಯ ಕೊನೆಯ ಪಂದ್ಯ ಇದಾಗಿರಬಹುದು ಎಂಬ ಲೆಕ್ಕಾಚಾರದಲ್ಲಿ ಅವರು ಆಡುವುದನ್ನು ಕೊನೆಯ ಬಾರಿ ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಸಿಎಸ್ ಕೆ ಅಭಿಮಾನಿಗಳು ಅಹಮ್ಮದಾಬಾದ್ ಗೆ ಬಂದಿಳಿದಿದ್ದರು. ಆದರೆ ಪಂದ್ಯ ಮುಂದೂಡಿಕೆಯಾಗಿದ್ದರಿಂದ ರೈಲು, ಬಸ್ ನಿಲ್ದಾಣವೆಂಬಂತೆ ಸಿಕ್ಕ ಸಿಕ್ಕಲ್ಲಿ ಮಲಗಿ ನಿನ್ನೆಯ ರಾತ್ರಿ ಕಳೆದ ದೃಶ್ಯ ಕಂಡುಬಂದಿದೆ. ಧೋನಿ ಅಭಿಮಾನಿಗಳ ಈ ಭಕ್ತಿಗೆ ನೆಟ್ಟಿಗರು ಕ್ಲೀನ್ ಬೌಲ್ಡ್ ಆಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ