ಐಪಿಎಲ್ 2023: ಗೆಲುವಿನ ಹಳಿಗೆ ಬಂದ ಗುಜರಾತ್

ಶುಕ್ರವಾರ, 14 ಏಪ್ರಿಲ್ 2023 (08:40 IST)
ಮೊಹಾಲಿ: ಐಪಿಎಲ್ 2023 ರಲ್ಲಿ ಸತತ ಗೆಲುವಿನ ಬಳಿಕ ಕಳೆದ ಪಂದ್ಯದಲ್ಲಿ ಅನಿರೀಕ್ಷಿತ ಸೋಲು ಕಂಡಿದ್ದ ಗುಜರಾತ್ ಟೈಟನ್ಸ್ ಇದೀಗ ಗೆಲುವಿನ ಹಾದಿಗೆ ಮರಳಿದೆ.

ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ನಡೆದ ಪಂದ್ಯವನ್ನು 6 ವಿಕೆಟ್ ಗಳಿಂದ ಗೆದ್ದುಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿತು.

ಇದಕ್ಕೆ ಉತ್ತರವಾಗಿ ಗುಜರಾತ್ 19.5 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 154 ರನ್ ಗಳಿಸಿತು. ಶುಬ್ಮನ್ ಗಿಲ್ 67 ರನ್ ಸಿಡಿಸಿದರೆ ಅವರಿಗೆ ತಕ್ಕ ಸಾಥ್ ನೀಡಿದ ಇನ್ನೋರ್ವ ಓಪನರ್ ವೃದ್ಧಿಮಾನ್ ಸಹಾ 30 ರನ್ ಗಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ