ಐಪಿಎಲ್ 2023: ಹೈದರಾಬಾದ್ ವಿರುದ್ಧ ನಡೆಯಲಿಲ್ಲ ರಿಂಕು ಸಿಂಗ್ ಮ್ಯಾಜಿಕ್

ಶನಿವಾರ, 15 ಏಪ್ರಿಲ್ 2023 (08:10 IST)
ಕೋಲ್ಕೊತ್ತಾ: ಐಪಿಎಲ್ 2023 ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ 23 ರನ್ ಗಳ ಗೆಲುವು ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 228 ರನ್ ಗಳಿಸಿತು. ಹ್ಯಾರೀ ಬ್ರೂಕ್ (100) ಶತಕ ದಾಖಲಿಸಿದರು. ನಾಯಕ ಆಡನ್ ಮಾರ್ಕರಮ್ 50 ರನ್ ಗಳ ಕೊಡುಗೆ ನೀಡಿದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಕೆಕೆಆರ್ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಲಷ್ಟೇ ಶಕ್ತವಾಯಿತು. ಕಳೆದ ಪಂದ್ಯದಲ್ಲಿ ಕೆಕೆಆರ್ ಗೆ ಅಸಾಧ‍್ಯ ಗೆಲುವು ಕೊಡಿಸಿದ್ದ ರಿಂಕು ಸಿಂಗ್ ಇಂದೂ ಕೂಡಾ ಭರ್ಜರಿ ಬ್ಯಾಟಿಂಗ್ ನಡೆಸಿದರು. ಕೇವಲ 31 ಎಸೆತಗಳಲ್ಲಿ 58 ರನ್ ಸಿಡಿಸಿ ಅಜೇಯರಾಗುಳಿದರು. ಆದರೆ ಮೊನ್ನೆಯಂತೇ ಗೆಲುವು ಕೊಡಿಸಲು ಸಾಧ‍್ಯವಾಗಲಿಲ್ಲ. ನಾಯಕ ನಿತೀಶ್ ರಾಣಾ 75 ರನ್ ಗಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ