ಐಪಿಎಲ್ 2023: ಮುಂಬೈಗೆ ಸತತ ಎರಡನೇ ಸೋಲು
ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಲಷ್ಟೇ ಶಕ್ತವಾಯಿತು. ನಾಯಕ ರೋಹಿತ್ 21, ಇಶಾನ್ ಕಿಶನ್ 32, ತಿಲಕ್ ವರ್ಮ 22, ಟಿಮ್ ಡೇವಿಡ್ 31 ರನ್ ಗಳಿಸಿದರು. ಸಿಎಸ್ ಕೆ ಪರ ರವೀಂದ್ರ ಜಡೇಜಾ 3 ವಿಕೆಟ್ ಕಿತ್ತರು.
ಈ ಮೊತ್ತ ಬೆನ್ನತ್ತಿದ ಸಿಎಸ್ ಕೆ ಆರಂಭದಲ್ಲೇ ಕಾನ್ವೇ (0) ವಿಕೆಟ್ ಕಳೆದುಕೊಂಡರೂ ಇನ್ ಫಾರ್ಮ್ ಬ್ಯಾಟಿಗ ಋತುರಾಜ್ ಗಾಯಕ್ ವಾಡ್ (40) ಮತ್ತು ಅಜಿಂಕ್ಯಾ ರೆಹಾನೆ (61) ಸ್ಪೋಟಕ ಬ್ಯಾಟಿಂಗ್ ನಿಂದ 18.1 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 159 ರನ್ ಗಳಿಸಿ ಗೆಲುವಿನ ನಗೆ ಬೀರಿತು.