ಕೆಎಲ್ ರಾಹುಲ್ ರನ್ನು ಸ್ವಾರ್ಥಿ ಎಂದು ಜರೆದ ನೆಟ್ಟಿಗರು

ಶನಿವಾರ, 8 ಏಪ್ರಿಲ್ 2023 (08:56 IST)
Photo Courtesy: Twitter
ಲಕ್ನೋ: ಐಪಿಎಲ್ 2023 ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಡಿಆರ್ ಎಸ್ ತೆಗೆದುಕೊಂಡ ಲಕ್ನೋ ನಾಯಕ ಕೆಎಲ್ ರಾಹುಲ್ ರನ್ನು ನೆಟ್ಟಿಗರು ಸ್ವಾರ್ಥಿ ಎಂದು ಜರೆದಿದ್ದಾರೆ.

ಹೈದರಾಬಾದ್ ನೀಡಿದ್ದ 122 ರನ್ ಗಳ ಗುರಿ ಚೇಸ್ ಮಾಡುತ್ತಿದ್ದ ಲಕ್ನೋ ಪರ ನಾಯಕ ಕೆಎಲ್ ರಾಹುಲ್ ಉತ್ತಮವಾಗಿಯೇ ಆಡುತ್ತಿದ್ದರು. ಆದರೆ ರಾಹುಲ್ 35 ರನ್ ಗಳಿಸಿದ್ದಾಗ ಹೈದರಾಬಾದ್ ಸ್ಪಿನ್ನರ್ ಆದಿಲ್ ರಶೀದ್ ಎಸೆತದಲ್ಲಿ ಬಾಲ್ ಪ್ಯಾಡ್ ಗೆ ತಗುಲಿತ್ತು. ಕೂಡಲೇ ಅಂಪಾಯರ್ ಔಟ್ ತೀರ್ಪು ನೀಡಿದ್ದರು.

ಕ್ಲಿಯರ್ ಆಗಿ ಎಲ್ ಬಿಡಬ್ಲ್ಯು ಆಗಿದ್ದರೂ ರಾಹುಲ್ ತಲೆ ಅಲ್ಲಾಡಿಸುತ್ತಾ ಡಿಆರ್ ಎಸ್ ಗೆ ಮನವಿ ಸಲ್ಲಿಸಿದರು. ಬಳಿಕ ಡಿಆರ್ ಎಸ್ ನಲ್ಲೂ ಔಟ್ ಎಂದು ತೀರ್ಪು ಬಂತು. ರಾಹುಲ್ ರ ಈ ಡಿಆರ್ ಎಸ್ ನಿರ್ಧಾರವನ್ನು ನೋಡಿ ನೆಟ್ಟಿಗರು ಅವರನ್ನು ಸ್ವಾರ್ಥಿ ಎಂದು ಲೇವಡಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ