ಐಪಿಎಲ್ 2023: ಕೆಕೆಆರ್ ಗೆ ಫಿನಿಶಿಂಗ್ ಟನ್ ಕೊಟ್ಟ ರಿಂಕು ಸಿಂಗ್

ಮಂಗಳವಾರ, 9 ಮೇ 2023 (07:10 IST)
ಕೋಲ್ಕೊತ್ತಾ: ಐಪಿಎಲ್ 2023 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯವನ್ನು ಕೋಲ್ಕೊತ್ತಾ ನೈಟ್ ರೈಡರ್ಸ್ 5 ವಿಕೆಟ್ ಗಳಿಂದ ರೋಚಕವಾಗಿ ಗೆದ್ದುಕೊಂಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು. ನಾಯಕ ಶಿಖರ್ ಧವನ್ 57 ರನ್ ಸಿಡಿಸಿದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಕೆಕೆಆರ್ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತು. ನಿತೀಶ್ ರಾಣಾ 51, ಆಂಡ್ರೆ ರಸೆಲ್ 42 ರನ್ ಗಳಿಸಿದರು. ಆದರೆ ಅಂತಿಮ ಎಸೆತದಲ್ಲಿ ಬೌಂಡರಿ ಗಳಿಸಿದ ರಿಂಕು ಸಿಂಗ್ ತಂಡಕ್ಕೆ ಗೆಲುವು ಕೊಡಿಸುವ ಮೂಲಕ ಮತ್ತೆ ತಾವೊಬ್ಬ ಉತ್ತಮ ಫಿನಿಶರ್ ಎಂದು ಸಾಬೀತುಪಡಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ