ಐಪಿಎಲ್ 2023: ಆರಂಭದ ಪಂದ್ಯದಲ್ಲೇ ಅಬ್ಬರಿಸಿದ ಋತುರಾಜ್ ಗಾಯಕ್ ವಾಡ್
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್ ಕೆಗೆ ಆರಂಭಿಕ ಋತುರಾಜ್ ಗಾಯಕ್ ವಾಡ್ ಬಿರುಸಿನ ಆರಂಭ ನೀಡಿದರು. ಡೆವನ್ ಕಾನ್ವೇ ಕೇವಲ 1 ರನ್ ಗೆ ವಿಕೆಟ್ ಒಪ್ಪಿಸಿದರೂ ಋತುರಾಜ್ ಏಕಾಂಗಿಯಾಗಿ ಆಡುತ್ತಿದ್ದರು. ಒಟ್ಟಾರೆ 50 ಎಸೆತ ಎದುರಿಸಿದ ಋತುರಾಜ್ 92 ರನ್ ಗಳಿಸಿ ಔಟಾದರು.
ಮೊಯಿನ್ ಅಲಿ 23 ರನ್ ಗಳ ಕೊಡುಗೆ ನೀಡಿದರು. ಬೆನ್ ಸ್ಟೋಕ್ ಕೇವಲ 7 ರನ್ ಗೆ ಔಟಾದರೆ ಅಂಬಟಿ ರಾಯುಡು 12 ರನ್ ಗಳಿಸಲಷ್ಟೇ ಶಕ್ತರಾದರು. ಗುಜರಾತ್ ಪರ ರಶೀದ್ ಖಾನ್ 2 ವಿಕೆಟ್ ಕಬಳಿಸಿದರು. ಇತ್ತೀಚೆಗಿನ ವರದಿ ಬಂದಾಗ ಸಿಎಸ್ ಕೆ 17.4 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿದೆ.