ಲಕ್ನೋ: ಐಪಿಎಲ್ 2024 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೋತರೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ದಾಖಲೆಯೊಂದನ್ನು ಮಾಡಿದ್ದಾರೆ.
ಧೋನಿ ಇದೀಗ ಐಪಿಎಲ್ ನಲ್ಲಿ ಕೇವಲ ಆಟಗಾರನಾಗಿ ಕಣಕ್ಕಿಳಿಯುತ್ತಿದ್ದಾರೆ. ಬ್ಯಾಟಿಂಗ್ ನಲ್ಲಿ ಕೊನೆಯ ಓವರ್ ಗಳಲ್ಲಿ ಬ್ಯಾಟಿಂಗ್ ಗೆ ಬರುವ ಧೋನಿ ತಂಡಕ್ಕೆ ದೊಡ್ಡ ಹೊಡೆತಗಳನ್ನು ಸಿಡಿಸಿ ಉತ್ತಮ ಮೊತ್ತ ಗಳಿಸಿಕೊಡುತ್ತಿದ್ದಾರೆ. ನಿನ್ನೆಯೂ ಧೋನಿ ಇಂತಹದ್ದೇ ಧಮಾಕಾ ಇನಿಂಗ್ಸ್ ಆಡಿದ್ದರು.
ಇದರೊಂದಿಗೆ ಧೋನಿ ದಾಖಲೆಯೊಂದನ್ನು ಮಾಡಿದ್ದಾರೆ. ನಿನ್ನೆಯ ಪಂದ್ಯದಲ್ಲಿ ಧೋನಿ 9 ಎಸೆತ ಎದುರಿಸಿ 2 ಸಿಕ್ಸರ್, 3 ಬೌಂಡರಿಯೊಂದಿಗೆ 28 ರನ್ ಬಾರಿಸಿದ್ದರು. ಇದರೊಂದಿಗೆ ಅಂತಿಮ ಓವರ್ ನಲ್ಲಿ ಅತ್ಯಧಿಕ ಸಿಕ್ಸರ್ ಸಿಡಿಸಿದ ದಾಖಲೆಯೊಂದನ್ನು ಮಾಡಿದ್ದಾರೆ.
ಕೊನೆಯ ಓವರ್ ನಲ್ಲಿ ಧೋನಿ ಇದುವರೆಗೆ 65 ಸಿಕ್ಸರ್ ಸಿಡಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲೇ ಧೋನಿಯನ್ನು ಹೊರತುಪಡಿಸಿ ಯಾರೂ ಕೊನೆಯ ಓವರ್ ನಲ್ಲಿ 50 ಪ್ಲಸ್ ಸಿಕ್ಸರ್ ಸಿಡಿಸಿದ ಆಟಗಾರರು ಯಾರೂ ಇಲ್ಲ. ಐಪಿಎಲ್ ನಲ್ಲಿ ಕೊನೆಯ ಓವರ್ ನಲ್ಲಿ ಧೋನಿ ಇದುವರೆಗೆ 313 ಎಸೆತಗಳನ್ನು ಎದುರಿಸಿದ್ದಾರೆ. ಈ ಪೈಕಿ 53 ಬೌಂಡರಿ, 65 ಸಿಕ್ಸರ್ ಗಳೊಂದಿಗೆ 772 ರನ್ ಕಲೆ ಹಾಕಿದ್ದಾರೆ. ಈ ಬಾರಿಯ ಕೂಟದಲ್ಲಿ ಕೊನೆಯ ಓವರ್ ನಲ್ಲಿ 16 ಎಸೆತ ಎದುರಿಸಿ 6 ಸಿಕ್ಸರ್ ಸಿಡಿಸಿದ್ದಾರೆ.