IPL 2024: ಐಪಿಎಲ್ ನಲ್ಲಿ ಗರಿಷ್ಠ ಸಿಕ್ಸರ್ ಗಳಿಸಿದ ಭಾರತೀಯ ಆಟಗಾರರು
ರೋಹಿತ್ ಶರ್ಮಾ: ಹಿಟ್ ಮ್ಯಾನ್ ರೋಹಿತ್ ಡೆಕ್ಕನ್ ಚಾರ್ಜರ್ಸ್ ಮತ್ತು ಮುಂಬೈ ಇಂಡಿಯನ್ಸ್ ಪರ ಇದುವರೆಗೆ ಐಪಿಎಲ್ ಆಡಿದ್ದಾರೆ. ಇದುವರೆಗೆ ಐಪಿಎಲ್ ನಲ್ಲಿ 257 ಸಿಕ್ಸರ್ ಸಿಡಿಸಿದ ಅವರು ಮೊದಲ ಸ‍್ಥಾನದಲ್ಲಿದ್ದಾರೆ.
ಎಂ.ಎಸ್.ಧೋನಿ: ಬಿಗ್ ಹಿಟ್ಟರ್ ಧೋನಿ ಇದುವರೆಗೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪುಣೆ ವಾರಿಯರ್ಸ್ ಪರ ಐಪಿಎಲ್ ಆಡಿದ್ದಾರೆ. ಈ ಪೈಕಿ ಅವರು 239 ಸಿಕ್ಸರ್ ಸಿಡಿಸಿದ್ದಾರೆ.
ವಿರಾಟ್ ಕೊಹ್ಲಿ: ಕ್ರಿಕೆಟ್ ನ ಕಿಂಗ್ ವಿರಾಟ್ ಕೊಹ್ಲಿ ಇದುವರೆಗೆ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನಿಷ್ಠರಾಗಿದ್ದಾರೆ. ಅವರ ಬ್ಯಾಟ್ ನಿಂದ ಇದುವರೆಗೆ ಸಿಡಿದ ಸಿಕ್ಸರ್ ಗಳ ಸಂಖ್ಯೆ 234.
ಸುರೇಶ್ ರೈನಾ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹಳೆಯ ಹುಲಿ ಸುರೇಶ್ ರೈನಾ ಒಟ್ಟು 203 ಸಿಕ್ಸರ್ ಸಿಡಿಸಿದ್ದರು.
ಸಂಜು ಸ್ಯಾಮ್ಸನ್: ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಬಿಗ್ ಹಿಟ್ಟರ್ ಖ್ಯಾತಿ ಹೊಂದಿದ್ದಾರೆ. ಇದುವರೆಗೆ ಅವರು 182 ಸಿಕ್ಸರ್ ಸಿಡಿಸಿದ್ದಾರೆ.
ರಾಬಿನ್ ಉತ್ತಪ್ಪ: ಕರ್ನಾಟಕದ ಕೊಡಗಿನ ವೀರ ರಾಬಿನ್ ಉತ್ತಪ್ಪ ಕೂಡಾ ದೊಡ್ಡ ಹೊಡೆತಗಳಿಗೆ ಹೆಸರು ವಾಸಿ. ಇದುವರೆಗೆ ಆರು ಐಪಿಎಲ್ ಫ್ರಾಂಚೈಸಿಗಳಿಗೆ ಆಡಿರುವ ಉತ್ತಪ್ಪ 182 ಸಿಕ್ಸರ್ ಸಿಡಿಸಿದ್ದಾರೆ.
ಅಂಬಟಿ ರಾಯುಡು: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುತ್ತಿದ್ದ ಅಂಬಟಿ ರಾಯುಡು 173 ಸಿಕ್ಸರ್ ಸಿಡಿಸಿದ್ದರು.
ಕೆಎಲ್ ರಾಹುಲ್: ಕನ್ನಡಿಗ ಕೆಎಲ್ ರಾಹುಲ್ ಆರ್ ಸಿಬಿ, ಪಂಜಾಬ್ ಬಳಿಕ ಈಗ ಲಕ್ನೋ ತಂಡದ ನಾಯಕರಾಗಿದ್ದಾರೆ. ಅವರು ಇದುವರೆಗೆ 168 ಸಿಕ್ಸರ್ ಸಿಡಿಸಿದ್ದಾರೆ.
ಯೂಸುಫ್ ಪಠಾಣ್: ಐಪಿಎಲ್ ಇತಿಹಾಸದಲ್ಲೇ ಬೆಸ್ಟ್ ಬಿಗ್ ಹಿಟ್ಟರ್ ಎಂಬ ಖ್ಯಾತಿಯಲ್ಲಿದ್ದ ಯೂಸುಫ್ ಪಠಾಣ್ ಒಟ್ಟು 158 ಸಿಕ್ಸರ್ ಸಿಡಿಸಿದ್ದರು.
ಯುವರಾಜ್ ಸಿಂಗ್: ಕ್ರಿಕೆಟ್ ನಲ್ಲಿ ಸಿಕ್ಸರ್ ಕಿಂಗ್ ಎಂದೇ ಜನಪ್ರಿಯರಾಗಿರುವ ಯುವರಾಜ್ ಸಿಂಗ್ ಐಪಿಎಲ್ ನಲ್ಲಿ ಒಟ್ಟು 149 ಸಿಕ್ಸರ್ ಸಿಡಿಸಿದ್ದರು.