ಐಪಿಎಲ್ 2024: ಆರ್ ಸಿಬಿಗೆ ಪ್ಲೇ ಆಫ್ ನಲ್ಲಿ ರಾಜಸ್ಥಾನ್ ರಾಯಲ್ಸ್ ಸಿಕ್ಕಿದ್ದಕ್ಕೆ ಒಳಗೊಳಗೇ ಖುಷಿ

Krishnaveni K

ಸೋಮವಾರ, 20 ಮೇ 2024 (11:59 IST)
ಬೆಂಗಳೂರು: ಐಪಿಎಲ್ 2024 ರಲ್ಲಿ ಲೀಗ ಹಂತದ ಪಂದ್ಯ ಮುಕ್ತಾಯವಾಗಿದ್ದು ನಾಲ್ಕು ತಂಡಗಳು ಪ್ಲೇ ಆಫ್ ಹಂತಕ್ಕೇರಿವೆ. ಆರ್ ಸಿಬಿ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ಎರಡನೇ ಪ್ಲೇ ಆಫ್ ಪಂದ್ಯ ನಡೆಯಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕೋಲ್ಕೊತ್ತಾ ಅಥವಾ ಹೈದರಾಬಾದ್ ಪ್ಲೇ ಆಫ್ ನಲ್ಲಿ ಎದುರಾಳಿಯಾಗಬಹುದೇನೋ ಎಂಬ ಆತಂಕವಿತ್ತು. ಯಾಕೆಂದರೆ ಕೆಕೆಆರ್ ಮತ್ತು ಹೈದರಾಬಾದ್ ಎರಡೂ ಗರಿಷ್ಠ ಫಾರ್ಮ್ ನಲ್ಲಿದೆ. ಈ ಎರಡೂ ತಂಡಗಳು ಪ್ರಬಲ ಎದುರಾಳಿಗಳಾಗಿದ್ದು ಪ್ಲೇ ಆಫ್ ನಲ್ಲೇ ಹೊರಬಿದ್ದರೆ ಎಂಬ ಸಣ್ಣ ಆತಂಕ ಅಭಿಮಾನಿಗಳಲ್ಲಿತ್ತು.

ಆದರೆ ಈಗ ರಾಜಸ್ಥಾನ್ ರಾಯಲ್ಸ್ ಎದುರಾಳಿಯಾಗಿರುವುದು ಕೊಂಚ ಮಟ್ಟಿಗೆ ಸಮಾಧಾನಕರವಾಗಿದೆ. ಯಾಕೆಂದರೆ ರಾಜಸ್ಥಾನ್ ಕಳೆದ ನಾಲ್ಕು ಪಂದ್ಯಗಳನ್ನು ಸತತವಾಗಿ ಸೋತಿತ್ತು. ಕೊನೆಯ ಲೀಗ್ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ರಾಜಸ್ಥಾನ್ ಕೊಂಚ ಮಟ್ಟಿಗೆ ಈಗ ಫಾರ್ಮ್ ಕೊರತೆಯಲ್ಲಿದೆ.

ಇತ್ತ ಆರ್ ಸಿಬಿಗೂ ಕೊನೆಯ ಹಂತದಲ್ಲಿ ಪ್ರಮುಖ ಆಟಗಾರರಾದ ಕ್ಯಾಮರೂನ್ ಗ್ರೀನ್, ಗ್ಲೆನ್ ಮ್ಯಾಕ್ಸ್ ವೆಲ್ ಆರ್ ಸಿಬಿ ಬಿಟ್ಟು ರಾಷ್ಟ್ರೀಯ ತಂಡ ಸೇರಿಕೊಳ್ಳುವ ಸಾಧ‍್ಯತೆಯಿದೆ. ಹೀಗಾಗಿ ಆರ್ ಸಿಬಿಗೂ ಪ್ರಮುಖ ಆಟಗಾರರ ಅನುಪಸ್ಥಿತಿ ಕಾಡಲಿದೆ. ಹೀಗಿರುವಾಗ ಆರ್ ಸಿಬಿಗೆ ಪ್ಲೇ ಆಫ್ ಹಂತದಲ್ಲೇ ಪ್ರಬಲ ಎದುರಾಳಿ ಎದುರಾದರೆ ಕಷ್ಟವಾಗಲಿದೆ.

ಹೀಗಾಗಿ ರಾಜಸ್ಥಾನ್ ತಂಡ ಎದುರಾಳಿಯಾಗಿರುವ ವಿಚಾರ ಆರ್ ಸಿಬಿ ಅಭಿಮಾನಿಗಳಿಗೂ ಒಳಗೊಳಗೇ ಸಮಾಧಾನ ನೀಡಿದೆ. ಹೀಗಾಗಿ ಈ ಬಾರಿ ಐಪಿಎಲ್ ಫೈನಲ್ ಗೇರಬಹುದು ಎಂಬ ವಿಶ್ವಾಸದಲ್ಲಿ ಅಭಿಮಾನಿಗಳಿದ್ದಾರೆ. ಬುಧವಾರ ರಾಜಸ್ಥಾನ್ ಮತ್ತು ಆರ್ ಸಿಬಿ ನಡುವೆ ಪ್ಲೇ ಆಫ್ ಪಂದ್ಯ ನಡೆಯಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ