IPL 2024: ಚಿನ್ನಸ್ವಾಮಿಯಲ್ಲಿ ಕಿಂಗ್ ಕೊಹ್ಲಿ ಅಭ್ಯಾಸ, ಈ ಬಾರಿ ನಿರಾಸೆ ಮಾಡಬೇಡಿ ಎಂದ ಫ್ಯಾನ್ಸ್

Krishnaveni K

ಭಾನುವಾರ, 24 ಮಾರ್ಚ್ 2024 (16:16 IST)
Photo Courtesy: Twitter
ಬೆಂಗಳೂರು: ಪಂಜಾಬ್ ಕಿಂಗ್ಸ್ ವಿರುದ್ಧ ನಾಳೆ ನಡೆಯಲಿರುವ ಐಪಿಎಲ್ ಪಂದ್ಯಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರ ವಿರಾಟ್ ಕೊಹ್ಲಿ ಬಿರುಸಿನ ಅಭ್ಯಾಸ ನಡೆಸಿದ್ದಾರೆ.

ಚಿನ್ನಸ್ವಾಮಿ ಮೈದಾನದಲ್ಲಿ ಈಗಾಗಲೇ ಆರ್ ಸಿಬಿ ಆಟಗಾರರು ಅಭ್ಯಾಸ ಆರಂಭಿಸಿದ್ದಾರೆ. ವಿರಾಟ್ ಕೊಹ್ಲಿ ಇಂದು ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದಾರೆ. ಕೊಹ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನಮಗೆ ಈ ಬಾರಿ ನಿರಾಸೆ ಮಾಡಬೇಡಿ ಎಂದು ಅಭಿಮಾನಿಗಳು ಮನವಿ ಮಾಡಿದ್ದಾರೆ.

ಕಳೆದ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಕೊಹ್ಲಿ 20 ಎಸೆತ ಎದುರಿಸಿ ಗಳಿಸಿದ್ದು ಕೇವಲ 21 ರನ್. ಬಹಳ ದಿನಗಳ ನಂತರ ಕ್ರಿಕೆಟ್ ಮರಳಿದ್ದ ಕೊಹ್ಲಿಯಿಂದ ಅಭಿಮಾನಿಗಳು ದೊಡ್ಡ ಮೊತ್ತ ನಿರೀಕ್ಷಿಸಿದ್ದರು. ಆದರೆ ಹಾಗೆ ಆಗಲೇ ಇಲ್ಲ. ಕೊಹ್ಲಿ ಬೇಗನೇ ಔಟಾಗುವ ಮೂಲಕ ನಿರಾಸೆ ಮೂಡಿಸಿದ್ದರು.

ನಾಳೆ ತವರು ನೆಲದಲ್ಲಿ ಆರ್ ಸಿಬಿ ಪಂದ್ಯ ನಡೆಯಲಿದೆ. ಇಲ್ಲಿ ಕೊಹ್ಲಿಗೆ ಅನೇಕ ಅಭಿಮಾನಿಗಳಿದ್ದಾರೆ. ಅವರ ಆಟ ನೋಡಲೆಂದೇ ಕ್ರೀಡಾಂಗಣಕ್ಕೆ ಅಭಿಮಾನಿಗಳು ಬರುತ್ತಾರೆ. ಹೀಗಿರುವಾಗ ನಾಳೆಯ ಪಂದ್ಯದಲ್ಲಿ ಕೊಹ್ಲಿ ದೊಡ್ಡ ಮೊತ್ತ ಪೇರಿಸಲಿ ಎಂಬುದು ಅಭಿಮಾನಿಗಳ ಬಯಕೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ