RCB vs CSK: ಗೌರವ ಕೇಳಿಬರುವಂಥದ್ದಲ್ಲ, ಧೋನಿ ಜೊತೆಗಿನ ರಜತ್ ಪಾಟೀದಾರ್ ವರ್ತನೆ ವಿಡಿಯೋ ನೋಡಿ

Krishnaveni K

ಶನಿವಾರ, 29 ಮಾರ್ಚ್ 2025 (11:23 IST)
ಚೆನ್ನೈ: ಗೌರವ ಕೇಳಿಬರುವಂಥದ್ದಲ್ಲ..ಸಿಎಸ್ ಕೆ ವಿರುದ್ಧ ಪಂದ್ಯ  ಗೆದ್ದ ಬಳಿಕ ಆರ್ ಸಿಬಿ ನಾಯಕ ರಜತ್ ಪಾಟೀದಾರ್ ವರ್ತನೆಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಈ ವಿಡಿಯೋ ಇಲ್ಲಿದೆ ನೋಡಿ.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಚಿಪಾಕ್ ಮೈದಾನದಲ್ಲಿ ನಡೆದಿದ್ದ ಪಂದ್ಯವನ್ನು ಆರ್ ಸಿಬಿ 50 ರನ್ ಗಳಿಂದ ಗೆದ್ದುಕೊಂಡಿತು. ಧೋನಿ ಅಜೇಯರಾಗಿ 30 ರನ್ ಗಳಿಸಿದ್ದರು. ಪಂದ್ಯ ಮುಗಿದ ಬಳಿಕ ಎಲ್ಲಾ ಆಟಗಾರರ ಕೈಕುಲುಕುತ್ತಾ ಧೋನಿ ಪೆವಿಲಿಯನ್ ಕಡೆಗೆ ಸಾಗುತ್ತಿದ್ದರು.

ಈ ವೇಳೆ ರಜತ್ ಪಾಟೀದಾರ್ ಕೂಡಾ ಚೆನ್ನೈ ಆಟಗಾರರ ಕೈ ಕುಲುಕಲು ಮೈದಾನಕ್ಕೆ ಬಂದಿದ್ದರು. ಧೋನಿಯನ್ನು ಕಂಡೊಡನೆ ರಜತ್ ತಮ್ಮ ತಲೆಯ ಮೇಲಿದ್ದ ಕ್ಯಾಪ್ ತೆಗೆದು ಕೈಕುಲುಕುವ ಮೂಲಕ ಹಿರಿಯ ಆಟಗಾರನಿಗೆ ಗೌರವ ಸೂಚಿಸಿದ್ದಾರೆ.

ರಜತ್ ವರ್ತನೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗೌರವ ಕೇಳಿ ಪಡೆಯುವಂಥದ್ದಲ್ಲ. ಹಿರಿಯ ಆಟಗಾರ ಧೋನಿಯನ್ನು ಕಂಡೊಡನೆ ಯಾವುದೇ ಯುವ ಆಟಗಾರರೂ ತಾವಾಗಿಯೇ ಗೌರವ ಸೂಚಿಸುತ್ತಾರೆ ಎಂದಿದ್ದಾರೆ.


More than captaincy and scoring run, what i like more about Rajat is no Thala Dhoni gwak-gwak before the match but showing respect after the match by removing his cap during hand shake.????pic.twitter.com/oxwNktRlIs

— (SKY)???????????? (@SKY8___) March 28, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ