RCB vs CSK IPL 2025: ರವೀಂದ್ರ ಜಡೇಜಾರನ್ನು ರೇಗಿಸಿದ ಕೊಹ್ಲಿ: ಫನ್ನಿ ವಿಡಿಯೋ
ಚೆನ್ನೈ ಬ್ಯಾಟಿಂಗ್ ವೇಳೆ ಈ ಘಟನೆ ನಡೆದಿದ.ೆ ಶಿವಂ ದುಬೆ ಔಟಾದ ಬಳಿಕ ರವೀಂದ್ರ ಜಡೇಜಾ ನಾನ್ ಸ್ಟ್ರೈಕರ್ ಎಂಡ್ ನಲ್ಲಿದ್ದರು. ಇನ್ನೊಬ್ಬ ಸಹ ಬ್ಯಾಟಿಗನಿಗಾಗಿ ಜಡೇಜಾ ಕಾಯುತ್ತಿದ್ದರೆ ಇತ್ತ ಕೊಹ್ಲಿ ತನ್ನ ಸಹ ಆಟಗಾರರ ಜೊತೆ ಸಂಭ್ರಮಿಸುತ್ತಿದ್ದರು.
ಇದರ ನಡುವೆ ಒಬ್ಬರೇ ನಿಂತಿದ್ದ ಜಡೇಜಾ ಬಳಿ ಫನ್ನಿಯಾಗಿ ಡ್ಯಾನ್ಸ್ ಮಾಡುತ್ತಾ ತೆರಳಿದ ಕೊಹ್ಲಿ ಬೇಕೆಂದೇ ಜಡೇಜಾಗೆ ಢಿಕ್ಕಿ ಹೊಡೆದು ತಮಾಷೆ ಮಾಡಿದ್ದಾರೆ. ಅವರ ವರ್ತನೆಗೆ ಜಡೇಜಾಗೂ ನಗು ತಡೆಯಲಾಗಲಿಲ್ಲ.
ಈ ಫನ್ನಿ ವಿಡಿಯೋ ಎಲ್ಲರ ಗಮನ ಸೆಳೆಯುತ್ತಿದೆ. ನಿನ್ನ ಮೈದಾನದಲ್ಲಿ ಭಾರೀ ಜೋಶ್ ನಲ್ಲಿದ್ದ ಕೊಹ್ಲಿ ಸಾಕಷ್ಟು ಎಂಟರ್ ಟೈನ್ ಮೆಂಟ್ ಮಾಡಿದ್ದಾರೆ. ಎದುರಾಳಿಗಳಿಗೆ ಎರಡು ಬೆರಳು ಸನ್ನೆ ಮಾಡಿ ಎರಡು ವರ್ಷ ಬ್ಯಾನ್ ಆಗಿದ್ದಿರಿ ಎಂದು ಕಾಲೆಳೆದಿದ್ದಾರೆ.