ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಋತುವಿನ ಹೈ ವೋಲ್ಟೇಜ್ ಪಂದ್ಯವಾಗಿದ್ದ ಚೆನ್ನೈ ವಿರುದ್ಧ ಆರ್‌ಸಿಬಿ 50ರನ್ಸ್‌ಗಳೊಂದಿಗೆ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಚೆನ್ನೈನ ತವರು ನೆಲದಲ್ಲಿ ಆರ್‌ಸಿಬಿ ಹೊಸ ಇತಿಹಾಸ ಬರೆಯಿತು.
ಟಾಸ್ ಗೆದ್ದ ಚೆನ್ನೈ ಮೊದಲು ಫೀಲ್ಡಿಂಗ್ ಆಯ್ದುಕೊಂಡು, ಆರ್‌ಸಿಬಿಯನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಉತ್ತಮ ಆರಂಭದೊಂದಿಗೆ ಆರ್‌ಸಿಬಿ 7 ವಿಕೆಟ್ ಕಳೆದುಕೊಂಡು 196 ರನ್ ಗಳಿಸಿತು.
ಆರ್‌ಸಿಬಿ ನೀಡಿದ 197ರನ್‌ಗಳ ಗುರಿ ಬೆನ್ನಟ್ಟಿ ಚೆನ್ನೈ ಆರಂಭಿಕ ಹಂತದಲ್ಲೇ ಎರಡು ವಿಕೆಟ್ ಕಳೆದುಕೊಂಡು ಎಡವಿತು.
ಈ ಮೂಲಕ ಆರ್‌ಸಿಬಿ ಎದುರು ಚೆನ್ನೈ ಹೀನಾಯ ಸೋಲು ಅನುಭವಿಸಿತು. ತವರು ನೆಲ MA ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯಾಟದಲ್ಲಿ ತಮ್ಮ ಬದ್ಧ ಎದುರಾಳಿ ಆರ್‌ಸಿಬಿ ವಿರುದ್ಧ ಚೆನ್ನೈ ಅನುಭವಿಸಿದ ಸೋಲು ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿತು.
ಚೆನ್ನೈನ ನೆಲದಲ್ಲಿ ಆರ್‌ಸಿಬಿ ಅಮೋಘ ಗೆಲುವು ಸಾಧಿಸುತ್ತಿದ್ದ ಹಾಗೇ ಬೆಂಗಳೂರಿನಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.