IPL 2025: CSKಗೆ 197 ರನ್‌ಗಳ ಟಾರ್ಗೇಟ್ ನೀಡಿದ ಆರ್‌ಸಿಬಿ

Sampriya

ಶುಕ್ರವಾರ, 28 ಮಾರ್ಚ್ 2025 (21:20 IST)
Photo Courtesy X
ಚೆನ್ನೈ:  CSK ವಿರುದ್ಧದ ಐಪಿಎಲ್‌ ಮೊದಲ ಪಂದ್ಯಾಟದಲ್ಲಿ ಆರ್‌ಸಿಬಿ ಇದೀಗ 7ವಿಕೆಟ್ ಕಳೆದುಕೊಂಡು 196 ರನ್ ಗಳಿಸಿದೆ. ಈ ಮೂಲಕ ಸಿಎಸ್‌ಕೆಗೆ ಆರ್‌ಸಿಬಿ 197 ರನ್‌ಗಳ ಗೆಲುವಿನ ಟಾರ್ಗೇಟ್‌ ಅನ್ನು ನೀಡಿದೆ.

ಟಾಸ್‌ ಗೆದ್ದ ಸಿಎಸ್‌ಕೆ ಮೊದಲು ಫೀಲ್ಡಿಂಗ್ ಆಯ್ದುಕೊಂಡು ಆರ್‌ಸಿಬಿಯನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಆರಂಭಿಕ ಆಟಗಾರರಾದ ಸಾಲ್ಟ್‌ ಹಾಗೂ ಕೊಹ್ಲಿ ಉತ್ತಮ ಶುರು ಮಾಡಿದರು. ಸಾಲ್ಟ್‌ 16ಎಸೆತಗಳಲ್ಲಿ 32ರನ್‌, ವಿರಾಟ್ ಕೊಹ್ಲಿ 30 ಎಸೆತಗಳಲ್ಲಿ 31 ರನ್‌, ದೇವದತ್ತ್‌ ಪಡಿಕ್ಕಲ್‌ 14 ಎಸೆತಗಳಲ್ಲಿ 27ರನ್‌, ರಜತ್ ಪಟಿದಾರ್‌ 32 ಎಸೆತಗಳಲ್ಲಿ 51 ರನ್‌, ಲಿಯಾಮ್ ಲಿವಿಂಗ್ಸ್ಟೋನ್ 9ಎಸೆತಗಳಲ್ಲಿ 10ರನ್‌, ಜಿತೇಶ್ ಶರ್ಮಾ 6ಎಸೆತಗಳಲ್ಲಿ 12 ರನ್‌ ಹಾಗೂ ಡೇವಿಡ್‌ 8ಎಸೆತಗಳಲ್ಲಿ 22ರನ್ ಭುವನೇಶ್ವರ್ ಕುಮಾರ್‌ ಅವರು ಅಜೇಯವಾಗಿ ಉಳಿದರು.

ಈ ಮೂಲಕ ಸಿಎಸ್‌ಕೆಗೆ ಆರ್‌ಸಿಬಿ ಒಳ್ಳೆಯ ಟಾರ್ಗೇಟ್‌ ಅನ್ನು ನೀಡಿದೆ.

MA ಚಿದಂಬರಂ ಕ್ರೀಡಾಂಗಣದಲ್ಲಿ RCB ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ CSK ನಾಯಕ ರುತುರಾಜ್ ಗಾಯಕ್ವಾಡ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಈ ಮೂಲಕ ಆರ್‌ಸಿಬಿಯನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ