RCB vs CSK: ವಯಸ್ಸು 43 ಆದರೇನು, ಧೋನಿ ಮಿಂಚಿನ ಸ್ಟಂಪಿಂಗ್ ವಿಡಿಯೋ ನೋಡಿ
ಆರ್ ಸಿಬಿ ವಿರುದ್ಧ ಇಂದಿನ ಪಂದ್ಯದಲ್ಲಿ ಧೋನಿ ಮಿಂಚಿನಂತೆ ಫಿಲ್ ಸಾಲ್ಟ್ ರನ್ನು ಸ್ಟಂಪಿಂಗ್ ಮಾಡಿದ್ದು ಎಲ್ಲರ ಗಮನ ಸೆಳೆಯಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಗಿಳಿದ ಆರ್ ಸಿಬಿ ಫಿಲ್ ಸಾಲ್ಟ್ ರಿಂದ ಅಬ್ಬರದ ಆರಂಭ ಪಡೆಯಿತು. ಕೇವ 16 ಎಸೆತಗಳಲ್ಲಿ 32 ರನ್ ಚಚ್ಚಿದ್ದ ಫಿಲ್ ಸಾಲ್ಟ್ ರನ್ನು ಧೋನಿ ಸ್ಟಂಪ್ ಔಟ್ ಮಾಡಿದರು.
ಅದೂ ಕೆಲವೇ ಸೆಕೆಂಡುಗಳಲ್ಲಿ ಈ ಸ್ಟಂಪಿಂಗ್ ಮಾಡಿದ್ದಾರೆ. ಬ್ಯಾಟಿಗನ ಹೆಜ್ಜೆ ಮೊದಲೇ ಊಹಿಸಿ ಮಿಂಚಿನ ವೇಗದಲ್ಲಿ ಧೋನಿ ಔಟ್ ಮಾಡಿದ ರೀತಿ ನೋಡಿ ನೆಟ್ಟಿಗರು ನಿಜವಾಗಿಯೂ ಇವರನ್ನು ನೋಡಿ ಯುವಕರೂ ನಾಚಬೇಕು ಎಂದಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿರುವ ಆರ್ ಸಿಬಿ ನಾಯಕ ರಜತ್ ಪಾಟೀದಾರ್ ಅರ್ಧಶತಕದ ನೆರವಿನಿಂದ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿದೆ. ರಜತ್ 51 ರನ್ ಗಳಿಸಿ ಔಟಾದರು. ವಿರಾಟ್ ಕೊಹ್ಲಿ 30 ಎಸೆತಗಳಿಂದ 31 ರನ್ ಗಳಿಸಿದರು. ಅವರ ನಿಧಾನಗತಿಯ ಇನಿಂಗ್ಸ್ ಟೀಕೆಗೆ ಗುರಿಯಾಗಿದೆ.