IPL 2025: ಮುಂಬೈ ಇಂಡಿಯನ್ಸ್ ಮತ್ತೆ ರೋಹಿತ್ ಶರ್ಮಾರನ್ನು ಕಡೆಗಣಿಸಿತಾ, ವಿಡಿಯೋ ವೈರಲ್

Krishnaveni K

ಸೋಮವಾರ, 24 ಮಾರ್ಚ್ 2025 (09:36 IST)
Photo Credit: X
ಮುಂಬೈ: ಐಪಿಎಲ್ 2025 ರಲ್ಲಿ ನಿನ್ನೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತೊಮ್ಮೆ ಮಾಜಿ ನಾಯಕ ರೋಹಿತ್ ಶರ್ಮಾರನ್ನು ಕಡೆಗಣಿಸಿತಾ ಎಂಬ ಅನುಮಾನ ಫ್ಯಾನ್ಸ್ ಗೆ ಶುರುವಾಗಿದೆ. ರೋಹಿತ್ ಡ್ರೆಸ್ಸಿಂಗ್ ರೂಂನಲ್ಲಿ ಅಸಮಾಧಾನಗೊಂಡಿರುವ ವಿಡಿಯೋ ವೈರಲ್ ಆಗಿದೆ.

ರೋಹಿತ್ ಶರ್ಮಾ ನಿನ್ನೆಯ ಪಂದ್ಯದಲ್ಲಿ ಬ್ಯಾಟಿಂಗ್ ನಲ್ಲೂ ಹೇಳಿಕೊಳ್ಳುವ ಸಾಧನೆ ಮಾಡಲಿಲ್ಲ. ಶೂನ್ಯಕ್ಕೇ ನಿರ್ಗಮಿಸಿ ಬೇಡದ ದಾಖಲೆ ಮೈಮೇಲೆಳೆದುಕೊಂಡರು. ಅವರನ್ನು ನಿನ್ನೆ ಇಂಪ್ಯಾಕ್ಟ್ ಪ್ಲೇಯರ್ ಆಗಿದ್ದರು. ಹೀಗಾಗಿ ಫೀಲ್ಡಿಂಗ್ ಗೆ ಇಳಿದಿರಲಿಲ್ಲ. ಫೀಲ್ಡಿಂಗ್ ವೇಳೆ ಅವರು ಮೈದಾನದಲ್ಲಿದ್ದಿದ್ದರೆ ಅವರ ಅನುಭವ ಉಪಯೋಗಕ್ಕೆ ಬರುತ್ತಿತ್ತು ಎಂದು ಫ್ಯಾನ್ಸ್ ಅಭಿಪ್ರಾಯಪಟ್ಟಿದ್ದಾರೆ.

ಅಲ್ಲದೆ, ರೋಹಿತ್ ಕೂಡಾ ಫೀಲ್ಡಿಂಗ್ ಬಗ್ಗೆ ಡ್ರೆಸ್ಸಿಂಗ್ ರೂಂನಲ್ಲಿ ಕೂತಿದ್ದಾಗ ಪಕ್ಕದಲ್ಲಿದ್ದ ಸಹ ಆಟಗಾರನ ಜೊತೆ ತಮ್ಮ ಅಸಮಾಧಾನ ಹೊರಹಾಕುತ್ತಿದ್ದ ವಿಡಿಯೋ ವೈರಲ್ ಆಗಿದೆ.

ಹೀಗಾಗಿ ರೋಹಿತ್ ಅಭಿಮಾನಿಗಳು ಸಿಟ್ಟಾಗಿದ್ದಾರೆ. ಕಳೆದ ಬಾರಿ ರೋಹಿತ್ ರಿಂದ ನಾಯಕತ್ವ ಕಿತ್ತುಕೊಂಡು ಅವಮಾನ ಮಾಡಲಾಗಿತ್ತು. ಇದೀಗ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಮಾಡಿ ಅವಮಾನ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


rohit sharma on big screen, and the crowd erupts ????pic.twitter.com/vO0jXY10Tw

— ???? (@itshitmanera) March 23, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ